Home » Uncategorized » ಮಂಗಳವಾರ ‘ಸಬ್ ರಿಜಿಸ್ಟ್ರಾರ್’ ಕಚೇರಿಗೆ ರಜೆ : ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ

ಮಂಗಳವಾರ ‘ಸಬ್ ರಿಜಿಸ್ಟ್ರಾರ್’ ಕಚೇರಿಗೆ ರಜೆ : ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ

ಬೆಂಗಳೂರು : ಮಂಗಳವಾರ ‘ಸಬ್ ರಿಜಿಸ್ಟ್ರಾರ್’ ಕಚೇರಿಗೆ ರಜೆ ನೀಡುವ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಸರ್ಕಾರದ ಅಧಿಸೂಚನೆ ಪತ್ರದಲ್ಲಿ ಸೂಚಿಸಿರುವಂತೆ ರಾಜ್ಯದ ಪ್ರತಿಯೊಂದು ಜಿಲ್ಲಾನೋಂದಣಿ ಕಛೇರಿ ವ್ಯಾಪ್ತಿಯಲ್ಲಿನ ಉಪನೋಂದಣಿ ಕಛೇರಿಗಳು ಸದರಿಯ ಆಧಾರದ ಮೇಲೆ 2ನೇ ಶನಿವಾರ, 4ನೇ ಶನಿವಾರ ಮತ್ತು ಭಾನುವಾರಗಳ ರಜಾದಿನಗಳಂದು ಕರ್ತವ್ಯ ನಿರ್ವಹಿಸುವ ಒಂದು ಉಪನೋಂದಣಿ ಕಛೇರಿಗೆ ಮಂಗಳವಾರದ ದಿನವನ್ನು ರಜಾ ದಿನವೆಂದು ಘೋಷಿಸಿ ಆದೇಶಿಸಿರುತ್ತಾರೆ.

ಈ ಕುರಿತು ಉಲ್ಲೇಖಿತ ಪತ್ರದಲ್ಲಿನ ಅಧಿಸೂಚನೆಯಲ್ಲಿ ಸೂಚಿಸಿರುವಂತೆ ರಾಜ್ಯದ ಎಲ್ಲಾ ಉಪನೋಂದಣಿ ಕಛೇರಿಗಳು ದಿನಾಂಕ:01-06-2025 ರಿಂದ 28-12-2025 ರ ವರೆಗೆ ಬರುವ 2ನೇ ಶನಿವಾರ, 4ನೇ ಶನಿವಾರ ಮತ್ತು ಭಾನುವಾರಗಳ ರಜಾದಿನಗಳಂದು ಅನುಬಂಧದಲ್ಲಿ ದಿನಾಂಕಗಳನ್ನು ನಿಗಧಿಪಡಿಸಲಾಗಿದೆ. ಅದರಂತೆ ಕರ್ತವ್ಯ ನಿರ್ವಹಿಸುವಂತೆ ಸೂಚಿಸಿದೆ ಹಾಗೂ ನಿಗಧಿಪಡಿಸಿದ ದಿನಾಂಕಗಳಂದು ಕರ್ತವ್ಯ ನಿರ್ವಹಿಸಿದ ಉಪನೋಂದಣಾಧಿಕಾರಿಗಳು ಕಛೇರಿಗೆ ಕಾರ್ಯನಿರ್ವಹಿಸಿದ ರಜಾ ದಿನದಲ್ಲಿ ತಕ್ಷಣ ಬರುವ ಮುಂದಿನ ಮಂಗಳವಾರ ದಿನವನ್ನು ರಜಾ ದಿನವೆಂದು ಘೋಷಿಸಿದೆ.

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This