Home » ಉದ್ಯೋಗ » ಶಿಕ್ಷಕರ ನೇಮಕಾತಿ ಶುರು, ಕರ್ನಾಟಕದಲ್ಲಿ ಅರ್ಜಿ ಹಾಕುವುದು ಹೇಗೆ ಗೊತ್ತಾ?

ಶಿಕ್ಷಕರ ನೇಮಕಾತಿ ಶುರು, ಕರ್ನಾಟಕದಲ್ಲಿ ಅರ್ಜಿ ಹಾಕುವುದು ಹೇಗೆ ಗೊತ್ತಾ?

ಕರ್ನಾಟಕ ರಾಜ್ಯದಲ್ಲಿ ಶಿಕ್ಷಕರ ನೇಮಕಾತಿ ಆಗಬೇಕು, ಈ ಮೂಲಕ ಕರ್ನಾಟಕದಲ್ಲಿ ಹೊಸ ಶಿಕ್ಷಕರಿಗೆ ಕೆಲಸ ಸಿಗಬೇಕು ಅನ್ನೋ ಒತ್ತಾಯ ಕೂಡ ಕೇಳಿ ಬರುತ್ತಲೇ ಇತ್ತು. ಸಿದ್ದರಾಮಯ್ಯ ಅವರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕರ್ನಾಟಕ ರಾಜ್ಯದಲ್ಲಿ ಶಿಕ್ಷಕರ ನೇಮಕಾತಿಗೆ ಒತ್ತಡ ಕೂಡ ಹೆಚ್ಚಾಗಿತ್ತು.

ಅದರಲ್ಲೂ ಕಳೆದ ಹಲವು ವರ್ಷಗಳಿಂದ ಶಿಕ್ಷಕರ ನೇಮಕಾತಿ ಆಗಿಲ್ಲ, ಶಿಕ್ಷಕರ ನೇಮಕಾತಿ ಆಗಿಲ್ಲ… ಅಂತಾನೇ ಮಾತುಕತೆ ನಡೆಯುತ್ತಾ ಇತ್ತು. ಇಂತಹ ಸಮಯದಲ್ಲೇ, ಶಿಕ್ಷಕರ ನೇಮಕಾತಿ ಶುರು, ಕರ್ನಾಟಕದಲ್ಲಿ ಅರ್ಜಿ ಹಾಕುವುದು ಹೇಗೆ ಗೊತ್ತಾ?

ಹೌದು, ಕರ್ನಾಟಕದಲ್ಲಿ ಸರ್ಕಾರಿ ಕೆಲಸ ಪಡೆಯಲು ಲಕ್ಷಾಂತರ ಯುವಕರು & ಯುವತಿಯರು ಕಾಯ್ತಾ ಇದ್ದಾರೆ. ಅದರಲ್ಲೂ ಶಿಕ್ಷಕರಾಗಿ ಕೆಲಸ ಮಾಡಲು ಸಾಕಷ್ಟು ಅಭ್ಯರ್ಥಿಗಳು ತಪಸ್ಸು ಮಾಡ್ತಾ ಇದ್ದಾರೆ. ಹೀಗೆ ಇದ್ದಾಗ ಸರ್ಕಾರ ಕೂಡ ಶೀಘ್ರದಲ್ಲೇ ಶಿಕ್ಷಕರ ನೇಮಕಾತಿ ಮಾಡುವ ಬಗ್ಗೆ ಮಾತು ಕೊಟ್ಟಿತ್ತು. ಇಷ್ಟೆಲ್ಲದರ ನಡುವೆ ಇದೀಗ ಶಿಕ್ಷಕರ ನೇಮಕಾತಿ ಬಗ್ಗೆ ಮಹತ್ವದ ಮಾಹಿತಿಯನ್ನ ನೀಡಲಾಗಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಮುಂದೆ ಇದ್ದು, ವಿವರ ಪಡೆಯಲು ಮುಂದೆ ಓದಿ.

ಶಿಕ್ಷಕರ ನೇಮಕಾತಿಗೆ ಅರ್ಜಿ ಕರೆ…

ಯೆಸ್, ಸರ್ಕಾರಿ ವೀಕ್ಷಣಾಲಯದಿಂದ ಇದೀಗ 2025-26ನೇ ಸಾಲಿಗೆ ಬೆಂಗಳೂರು ನಗರ ಸಂಸ್ಥೆಯಲ್ಲಿರುವ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರಿಗೆ ದೈಹಿಕ ಶಿಕ್ಷಣ, ಎಜುಕೇಟರ್‍ ಮತ್ತು ಸಂಗೀತ / ಆರ್ಟ್ ಕ್ರಾಫ್ಟ್ ತರಬೇತಿ ನೀಡಲು ಅರ್ಹ ಅರೆಕಾಲಿಕ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಇನ್ನು ಅಭ್ಯರ್ಥಿಗಳು ದೈಹಿಕ ಕಂ ಯೋಗ ಶಿಕ್ಷಕರ ಹುದ್ದೆಗೆ ಡಿಪ್ಲೋಮ್‍ ಇನ್‍ ದೈಹಿಕ ಶಿಕ್ಷಣ / CP.Ed ನಲ್ಲಿ ಉತ್ತೀರ್ಣ ಆಗಿರಬೇಕು ಎಂದು ತಿಳಿಸಲಾಗಿದೆ. ಎಜುಕೇಟರ್‍ ಹುದ್ದೆಗೆ D.Ed ನಲ್ಲಿ ತೇರ್ಗಡೆ ಹೊಂದಿರಬೇಕು ಎಂದು ತಿಳಿಸಲಾಗಿದೆ. ಸಂಗೀತ / ಆರ್ಟ್ ಕ್ರಾಫ್ಟ್ ಹುದ್ದೆಗೆ ಸಂಗೀತ ಕ್ಷೇತ್ರದಲ್ಲಿ ಪದವಿ ಪಡೆದಿರಬೇಕು.

ಅರ್ಜಿ ಸಲ್ಲಿಸಬೇಕಾದ ವಿಳಾಸ ಇಲ್ಲಿದೆ

ಇನ್ನು ಈ ಹುದ್ದೆಗೆ ಅರ್ಜಿ ಹಾಕಲು ಇಚ್ಛಿಸುವ ಅಭ್ಯರ್ಥಿಗಳು, ಜುಲೈ 19 ಶನಿವಾರ ಸಂಜೆ 4 ಗಂಟೆ ಒಳಗೆ ಸ್ವವಿವರ ಒಳಗೊಂಡ ಅರ್ಜಿಯನ್ನ & ಅಗತ್ಯ ದಾಖಲಾತಿಗಳ ಜೊತೆಗೆ ತ್ರಿಪ್ರತಿಯಲ್ಲಿ ಸರ್ಕಾರಿ ವೀಕ್ಷಣಾಲಯ, ಬೆಂಗಳೂರು ನಗರ ಜಿಲ್ಲೆ, ಸಂತೆಬೀದಿ, ಸಿದ್ದಾರ್ಥ ಬಡಾವಣೆ, ಮಡಿವಾಳ, ಬೆಂಗಳೂರು-68 ಈ ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದು. ಇನ್ನು ಈ ಕುರಿತು ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆಯಾದ 080-2552 1342 ಮೂಲಕ ಸಂಪರ್ಕಿಸಬಹುದು ಎಂದು ಬೆಂಗಳೂರು ನಗರ ಜಿಲ್ಲೆ, ಸರ್ಕಾರಿ ವೀಕ್ಷಣಾಲಯ ಅಧೀಕ್ಷಕರು ಈಗ ಪ್ರಕಟಣೆಯಲ್ಲಿ ತಿಳಿಸುವ ಮೂಲಕ ಮಾಹಿತಿ ನೀಡಿದ್ದಾರೆ.

Source :oneindia.com

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This