Home » ಬೀದರ » ಮುಂಬರುವ ಮಹನೀಯರ ಜಯಂತಿಗಳನ್ನು
ಅರ್ಥಪೂರ್ಣವಾಗಿ ಆಚರಿಸೋಣ-ಎಡಿಸಿ ಶಿವಾನಂದ ಬಿ.ಕರಾಳೆ

ಮುಂಬರುವ ಮಹನೀಯರ ಜಯಂತಿಗಳನ್ನು
ಅರ್ಥಪೂರ್ಣವಾಗಿ ಆಚರಿಸೋಣ-ಎಡಿಸಿ ಶಿವಾನಂದ ಬಿ.ಕರಾಳೆ

ಬೀದರ, ಮಾರ್ಚ.12 (ಕರ್ನಾಟಕ ವಾರ್ತೆ):- ಮುಂಬರುವ ದಿನಾಂಕಗಳAದು ಬರುವ ಮಹನೀಯರ ಜಯಂತಿಗಳನ್ನು ಅರ್ಥಪೂರ್ಣವಾಗಿ ಆಚರಿಸೋಣ ಎಂದು ಅಪರ ಜಿಲ್ಲಾಧಿಕಾರಿಗಳಾದ ಶಿವಾನಂದ ಬಿ.ಕರಾಳೆ ತಿಳಿಸಿದರು.
ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಾ.23 ರಂದು ದೇವರ ದಾಸಿಮಯ್ಯ ಜಯಂತಿ, ಮಾ.28 ರಂದು ಶ್ರೀ ಅಗ್ನಿಬನ್ನಿರಾಯ ಜಯಂತಿ, ಮಾ.31 ರಂದು ಭಗವಾನ ಮಹಾವೀರ ಜಯಂತಿಗಳ ಆಚರಣೆ ಕುರಿತು ಕರೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಾರ್ಚ್.23 ರಂದು ಬರುವ ದೇವರ ದಾಸಿಮಯ್ಯ ಜಯಂತಿ ದಿನದಂದು ಬೆಳಿಗ್ಗೆ 9 ಗಂಟೆಗೆ ಎಲ್ಲಾ ಸರಕಾರಿ, ಅರೆ ಸರಕಾರಿ, ಶಾಲಾ-ಕಾಲೇಜುಗಳಲ್ಲಿ, ಸಂಘ-ಸAಸ್ಥೆಗಳಲ್ಲಿ ದೇವರದಾಸಿಮಯ್ಯ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ ಬೆಳಿಗ್ಗೆ 9.30 ಗಂಟೆಗೆ ಜಿಲಾಧಿಕಾರಿಗಳ ಕಚೇರಿಯಲ್ಲಿ ಭಾಚಿತ್ರಕ್ಕೆ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸುವುದು. ನಂತರ ಶಿವಾಜಿ ವೃತ್ತದಿಂದ ದೇವರ ದಾಸಿಮಯ್ಯ ಭಾವಚಿತ್ರದ ಮೆರವಣಿಗೆಯು ಪ್ರಾರಂಭಗೊAಡು ಭಗತಸಿಂಗ ವೃತ್ತ, ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತ, ಜನರಲ್ ಕರೀಯಪ್ಪ ವೃತ್ತದಿಂದ ಹಾದು ಪೂಜ್ಯ ಚನ್ನಬಸವ ಪಟ್ಟದೇವರು ರಂಗಮAದಿರಕ್ಕೆ ತಲುಪಿ ನಂತರ ಬೆಳಿಗ್ಗೆ 11.30 ಗಂಟೆಗೆ ವೇದಿಕೆ ಕಾರ್ಯಕ್ರಮ ಜರುಗಲಿದೆಂದರು.
ಮಹಾನಗರ ಪಾಲಿಕೆ ವತಿಯಿಂದ ಎಲ್ಲ ವೃತ್ತಗಳ ಮೇಲೆ ದೀಪಲಾಂಕರ, ರಸ್ತೆ ಸುತ್ತ ಮುತ್ತ ಸ್ವಚ್ಚತೆ, ಕುಡಿಯುವ ನೀರಿನ ವ್ಯವಸ್ಥೆ ಮಾಡುವುದು. ಪೊಲೀಸ್ ಇಲಾಖೆ ವತಿಯಿಂದ ಮೆರವಣಿಗೆ ಹಾದು ಹೋಗುವ ಸ್ಥಳಗಳಲ್ಲಿ ಸೂಕ್ತ ಬಂದೋಬಸ್ತ ವ್ಯವಸ್ಥೆ ಒದಗಿಸಬೇಕೆಂದರು.
ಮಾರ್ಚ್.28 ರಂದು ಬರುವ ಶ್ರೀ ಅಗ್ನಿಬನ್ನಿರಾಯರ ಜಯಂತಿ ಎಲ್ಲ ಶಾಲಾ ಕಾಲೇಜು, ಸಂಘ ಸಂಸ್ಥೆಗಳಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸರಳವಾಗಿ ಆಚರಣೆ ಮಾಡುವುದು. ಮಾರ್ಚ್.31 ರಂದು ಬರುವ ಭಗವಾನ ಮಹಾವೀರ ಜಯಂತಿಯನ್ನು ಕ್ರಾಂತಿ ಗಣೇಶ ಮಂದಿರ ಹತ್ತಿರ ಬರುವ ಚಂದ್ರಪ್ರಭ ದಿಗಂಬರ ಜೈನಮಂದಿರದಿAದ ಮೆರವಣಿಗೆ ಪ್ರಾರಂಭಗೊAಡು, ಗವಾನ ಚೌಕ, ಚೌಬಾರಾ, ನಯಾಕಮಾನ, ಬಸವೇಶ್ವರ ವೃತ್ತ, ಮಹಾವೀರ ಸರ್ಕಲ್, ಅಂಬೇಡ್ಕರ್ ವೃತ್ತ, ಜೈನ್ ಮಂದಿರದಲ್ಲಿ ಸಮಾಪ್ತಗೊಳ್ಳುವುದು ಎಂದು ತಿಳಿಸಿದರು.
ಈ ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ರಾಮ ಸಿಂಧೆ, ಅನಿತಾ ಶಾಪುರೆ, ದೇವರ ದಾಸಿಮಯ್ಯ ಜಯಂತಿ ಅಧ್ಯಕ್ಷ ಸೋಮಶೇಖರ ಅಮಲಾಪೂರ, ರಾಮಕರಷ್ಣ ಸಾಳೆ, ರಾಜಶೇಖರ ವಡಗೆ, ವಿಶ್ವನಾಥ ಕೋಟೆ, ಶರಣಪ್ಪ ಹಾವಗೊಂಡ, ರಾಜಶೇಖರ ಲಕೋಟೆ, ರಾಜೇಂದ್ರ ಅಂಬಾಜಿ, ನಾಗನಾಥ ಇದ್ದಲಗಾಂವ, ಮಾಧವ ಚಾಡಕಾರ ಭಗವಾನ ಮಹಾವೀರ ಜಯಂತಿ ಅಧ್ಯಕ್ಷರಾದ ನರಸಿಂಹರಾಜ ಟೆಕ್ಕೆ, ಸೇರಿದಂತೆ ಸಮಾಜದ ಮುಖಂಡರು, ಗಣ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This