Home » ಇತ್ತೀಚಿನ ಸುದ್ದಿ » ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ದೂರು ನೀಡಲು ‘ದೂರು ನಿರ್ವಹಣಾ ಕೋಶ’ ಆರಂಭ

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ದೂರು ನೀಡಲು ‘ದೂರು ನಿರ್ವಹಣಾ ಕೋಶ’ ಆರಂಭ

ಬೀದರ್, ಸೆಪ್ಟೆಂಬರ್ 28, (ಕರ್ನಾಟಕ ವಾರ್ತಾ) : ಭಾರತ ಚುನಾವಣಾ ಆಯೋಗವು ದಿನಾಂಕ:22.09.2026 ರಂದು ಕರ್ನಾಟಕ ವಿಧಾನ ಪರಿಷತ್ತ ಈಶಾನ್ಯ ಶಿಕ್ಷಕರ ಕ್ಷೇತ್ರ ಚುನಾವಣೆಯನ್ನು ಘೋಷಿಸಿ ವೇಳಾಪಟ್ಟಿಯನ್ನು ಹೊರಡಿಸಿರುತ್ತದೆ. ಈ ಹಿನ್ನೆಲೆಯಲ್ಲಿ ಚುನಾವಣೆಯ ಮಾದರಿ ನೀತಿ ಸಂಹಿತೆ ಹಾಗೂ ಮಾರ್ಗಸೂಚಿಗಳನ್ನು ಉಲ್ಲಂಘಿಸಿದಲ್ಲಿ ಅಂತಹವರ ವಿರುದ್ಧ ಲಿಖಿತವಾಗಿ ಅಥವಾ ದೂರವಾಣಿ ಮುಖಾಂತರ ಸಾರ್ವಜನಿಕರು ದೂರುಗಳನ್ನು ನೀಡಲು ಅನುಕೂಲಕರವಾಗುಂತೆ ಈ ಕಾರ್ಯಾಲಯದಲ್ಲಿ ದೂರ ಮೇಲ್ವಿಚಾರಣಾ ಕೋಶವನ್ನು ತೆರೆಯಲಾಗಿರುತ್ತದೆ. ದೂರು ಸಲ್ಲಿಸ ಬಯಸುವವರು ದೂರವಾಣಿ ಮುಖಾಂತರ ಈ ಕೆಳಕಂಡ ದೂರವಾಣಿ ಸಂಖ್ಯೆಗೆ ತಮ್ಮ ದೂರನ್ನು ಸಲ್ಲಿಸಬಹುದು. ಅಲ್ಲದೇ ಲಿಖಿತವಾಗಿಯು ಸಹ ಈ ಕಳಕಂಡ ವಿಳಾಸಕ್ಕೆ ವಿಳಾಸಿಸಿ ಪತ್ರ ವ್ಯವಹರಿಸಬಹುದೆಂದು ಈ ಮೂಲಕ ಸಾರ್ವಜನಿಕರ ಗಮನಕ್ಕೆ ತರಲಾಗಿದೆ. ಈ ದೂರು ನಿರ್ವಹಣಾ ಕೋಶವು ದಿನದ 24 ಗಂಟೆ ಕಾರ್ಯನಿರ್ವಹಿಸಲಾಗುವುದೆಂದು ಅಧಿಸೂಚಿಸಲಾಗಿದೆ.ದೂರವಾಣಿ ಸಂಖ್ಯೆ 08472 200255, ವಿಳಾಸ ಪ್ರಾದೇಶಿಕ ಆಯುಕ್ತರ ಕಾರ್ಯಾಲಯ, ಚುನಾವಣಾ ಶಾಖೆ, 2ನೇ ಮಹಡಿ, ಆಧುನಿಕ ಭವನ, ಸ್ಟೇಷನ್ ರಸ್ತೆ, ಕಲಬುರಗಿ 585102ಗೆ ಕಲಬುರಗಿ ವಿಭಾಗ, ಕರ್ನಾಟಕ ಈಶಾನ್ಯ ಶಿಕ್ಷಕರ ಕ್ಷೇತ್ರ ಹಾಗೂ ಪ್ರಾದೇಶಿಕ ಆಯುಕ್ತರು/ಚುನಾವಣಾಧಿಕಾರಿಗಳು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This