ಬೀದರ್, ಸೆ. 02: ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮದಿಂದ 2026-27ನೇ ಸಾಲಿನ ವಿವಿಧ ಯೋಜನೆಗಳಡಿ ಸಹಾಯಧನ ಹಾಗೂ ಸಾಲ-ಸೌಲಭ್ಯ ಪಡೆಯಲು ಅರ್ಹ ಮಡಿವಾಳ ಸಮುದಾಯದವರಿಂದ ಸೇವಾ ಸಿಂಧು ಪೋರ್ಟಲ್ ಮೂಲಕ ಆನ್ಲೈನ್ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನ: ಸೆಪ್ಟೆಂಬರ್ 30, 2026.
🔹 ಪ್ರಮುಖ ಸಾಮಾನ್ಯ ಅರ್ಹತೆಗಳು
ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
ಮಡಿವಾಳ ಹಾಗೂ ಅದರ ಉಪಜಾತಿಗಳಿಗೆ ಸೇರಿದವರಾಗಿರಬೇಕು.
ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣಪತ್ರ ಹೊಂದಿರಬೇಕು.
ಸಾಮಾನ್ಯ ವಯೋಮಿತಿ 18ರಿಂದ 55 ವರ್ಷ.
ಈ ಹಿಂದೆ ನಿಗಮ/ಸರ್ಕಾರದ ಯೋಜನೆಯಡಿ ಸೌಲಭ್ಯ ಪಡೆದಿರಬಾರದು.
ಕುಟುಂಬದ ಒಬ್ಬರಿಗೆ ಮಾತ್ರ ಸೌಲಭ್ಯ.
ಅರ್ಜಿದಾರರ ಮೊಬೈಲ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆ ಆಧಾರ್ಗೆ ಜೋಡಣೆಯಾಗಿರಬೇಕು.
🔹 ಲಭ್ಯವಿರುವ ಪ್ರಮುಖ ಯೋಜನೆಗಳು
ಸ್ವಯಂ ಉದ್ಯೋಗ ನೇರ ಸಾಲ ಯೋಜನೆ
ಅರಿವು ಶೈಕ್ಷಣಿಕ ಸಾಲ ಯೋಜನೆ – ನೂತನ
ಅರಿವು ಶೈಕ್ಷಣಿಕ ಸಾಲ ಯೋಜನೆ – ನವೀಕರಣ
ಆಧುನಿಕ ಲ್ಯಾಂಡ್ರಿ ಯೋಜನೆ
ಸ್ವಾವಲಂಬಿ ಸಾರಥಿ ಯೋಜನೆ
ಗಂಗಾ ಕಲ್ಯಾಣ ಯೋಜನೆ
ವಿದೇಶಿ ವ್ಯಾಸಂಗ ಸಾಲ ಯೋಜನೆ
ಆಧುನಿಕ ಲ್ಯಾಂಡ್ರಿ ಯೋಜನೆಯಡಿ ಬೆಂಗಳೂರು ಮತ್ತು ಮೈಸೂರು ನಗರದ ಧೋಬಿಘಾಟ್ಗಳಲ್ಲಿ ವಾಷಿಂಗ್ ಮೆಷಿನ್, ಡ್ರೈಯರ್, ಐರನಿಂಗ್ ಮೆಷಿನ್ ಸೇರಿದಂತೆ ಅಗತ್ಯ ಸಾಮಗ್ರಿಗಳೊಂದಿಗೆ ತಲಾ ₹75 ಲಕ್ಷ ಘಟಕ ವೆಚ್ಚದಲ್ಲಿ ಆಧುನಿಕ ಲ್ಯಾಂಡ್ರಿ ಸ್ಥಾಪಿಸಲು ಅವಕಾಶವಿದೆ.
🔹 ಅರಿವು ಯೋಜನೆ
ಅಭ್ಯರ್ಥಿಯ ವಯಸ್ಸು 18–30 ವರ್ಷ ಇರಬೇಕು. ವಾರ್ಷಿಕ ಆದಾಯದ ಮಿತಿ ₹3.50 ಲಕ್ಷ.
🔹 ಸ್ವಾವಲಂಬಿ ಸಾರಥಿ
ವಯೋಮಿತಿ 21–45 ವರ್ಷ.
🔹 ಗಂಗಾ ಕಲ್ಯಾಣ
ದಕ್ಷಿಣ ಕನ್ನಡ, ಉಡುಪಿ, ಕೊಡಗು, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳಲ್ಲಿ ಕನಿಷ್ಠ 1 ಎಕರೆ, ಇತರೆ ಜಿಲ್ಲೆಗಳಲ್ಲಿ ಕನಿಷ್ಠ 2 ಎಕರೆ ಜಮೀನು ಹೊಂದಿರಬೇಕು.
⚠️ ಮುಖ್ಯ ಸೂಚನೆ
2024-25 ಮತ್ತು 2025-26ರಲ್ಲಿ ಅರ್ಜಿ ಸಲ್ಲಿಸಿ ಸೌಲಭ್ಯ ಪಡೆಯದವರು ಅದೇ ಯೋಜನೆಗೆ ಮರು ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಅವರ ಹಿಂದಿನ ಅರ್ಜಿಯನ್ನು 2026-27ನೇ ಸಾಲಿಗೂ ಪರಿಗಣಿಸಲಾಗುತ್ತದೆ. ಆದರೆ ಇತರೆ ಯೋಜನೆಗಳಿಗೆ ಅರ್ಜಿ ಸಲ್ಲಿಸಬಹುದು.
📌 ಅರ್ಜಿ ಸಲ್ಲಿಸುವ ವಿಧಾನ
ಅರ್ಹರು Seva Sindhu ಪೋರ್ಟಲ್
👉 https://sevasindhu.karnataka.gov.in�
ಮೂಲಕ ಗ್ರಾಮ ಒನ್, ಬೆಂಗಳೂರು ಒನ್ ಅಥವಾ ಕರ್ನಾಟಕ ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು.







