ಬೀದರ್, ಆಗಸ್ಟ್ ೨೮, ೨೦೨೬: ಬೀದರ ಜಿಲ್ಲೆಯ ಪತ್ರಕೋದ್ಯಮದ ಭಿಷ್ಮ ಪಿತಾಮಹ ಎಂದೆ ಕರೆಯಲ್ಪಡುವ ದಿವಂಗತ ಶ್ರೀ ವಿಶ್ವನಾಥ ಪಾಟೀಲ ಅವರ ಹೆಸರಿನಲ್ಲಿ ನೀಡಲಾಗುವ ಪ್ರತಿಷ್ಠಿತ ಪ್ರಶಸ್ತಿಗೆ ಅವರದೇ ಒಬ್ಬ ಒಡನಾಡಿ ಹಾಗೂ ಶಿಶ್ಯನಾಗಿ, ದಮನ್ ಪತ್ರಿಕೆಯ ಉದಗಿರ ವರದಿಗಾರನಾಗಿ ಹಾಗೂ ನಂತರದಲ್ಲಿ, ಸಹ ಸಂಪಾದಕನಾಗಿ ೧೯೭೪ ರಿಂದ ೧೯೮೦ ರ ವರೆಗೆ ಸೇವೆ ಸಲ್ಲಿಸಿರುವ ಹಿರಿಯ ಪತ್ರಕರ್ತ ಕಳೆದ ೪೬ ವರ್ಷಗಳಿಂದ ಪಬ್ಲಿಕ್ ಕನ್ನಡ ದಿನ ಪತ್ರಿಕೆಯ ಸಂಪಾದಕನಾಗಿ ಕಾರ್ಯ ನಿರ್ವಹಿಸುತ್ತಿರುವ ಶ್ರೀ ಗಂಧರ್ವ ಸೇನಾ ಅವರಿಗೆ ದಮನ್ ಪಾಟೀಲ್ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ.
ದಿನಾಂಕ ೨೯-೮-೨೦೨೬ ರಂದು ಬೀದರ ನಗರದಲ್ಲಿ ನಡೆಯುತ್ತಿರುವ ಪತ್ರಿಕಾ ದಿನಾಚರಣೆ ನಿಮಿತ್ಯ ಎಐ ಯುಗದಲ್ಲಿ ಪತ್ರಕರ್ತರ ಭವಿಷ್ಯ ಎಂಬ ವಿಚಾರಗೋಷ್ಠಿಯಲ್ಲಿ ಈ ಪ್ರಶಸ್ತಿ ಪ್ರದಾನ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಈಶ್ವರ ಬಿ. ಖಂಡ್ರೆ ಅವರ ಹಸ್ತೆ ಈ ಪ್ರಶಸ್ತಿ ಪ್ರದಾನ ನಡೆಯಲಿದೆ.
ನಗರದ ಪುಜ್ಯ ಡಾ. ಚನ್ನಬಸವ ಪಟ್ಟ ದೇವರ ರಂಗ ಮಂದಿರನಲ್ಲಿ ಸದರಿ ಕಾರ್ಯಕ್ರಮ ನಡೆಯಲಿದೆ.
ಸದರಿ ಪ್ರಶಸ್ತಿಗೆ ಆಯ್ಕೆ ಆಗಿರುವ ಶ್ರೀ ಗಂಧರ್ವ ಸೇನಾ ಅವರು ತುಂಬಾ ಹರ್ಷ ವ್ಯಕ್ತ ಪಡಿಸಿದ್ದಾರೆ. ದಮನ್ ಪಾಟೀಲ್ ಅವರು ಆ ಕಾಲದ ಒಬ್ಬ ದಾರ್ಶನಿಕ, ಸಮಾಜ ಸುಧಾರಕ, ಕ್ರಾಂತಿಕಾರಿ ಹೋರಾಟಗಾರರು ಆಗಿದ್ದರು. ಅವರ ಲೇಖನಿಯಿಂದ ಬೀದರ ಜಿಲ್ಲೆಯ ಪತ್ರಿಕೋದ್ಯಮಕ್ಕೆ ಒಂದು ದಿಕ್ಕು ದಿಶೆ ಸಿಕ್ಕಿತು. ಬರೀ ಸುದ್ದಿಗಳು, ವರದಿಗಳು ಬರೆಯದೇ ಸಮಾಜದ ಕಟ್ಟ ಕಡೆಯ ದೀನ ದಲಿತರ, ವಂಚಿತರ ಧ್ವನಿಯಾಗಬೇಕು ಎಂದು ಸ್ವತ: ಅವರ ಸಂಪಾದಕತ್ವದ ಲೆಖನಗಳು ದಾರಿದೀಪ ಆಗಿದ್ದವು ಎಂದು ಶ್ರೀ ಗಂಧರ್ವ ಸೇನಾ ಅವರು ಈ ಸಂದರ್ಭದಲ್ಲಿ ತನ್ನ ಅಭಿಪ್ರಾಯ ವ್ಯಕ್ತ ಪಡಿಸಿದರು.
ತನ್ನ ಗುರು ಗಳ ಹೆಸರಿನ ಪ್ರಶಸ್ತಿಗೆ ತನ್ನನು ಆಯ್ಕೆ ಮಾಡಿದಕ್ಕೆ ಶ್ರೀ ಗಂಧರ್ವ ಸೇನಾ ಅವರು ಹರ್ಷ ವ್ಯಕ್ತ ಪಡಿಸಿದರು.







