Home » ಬೀದರ ಜಿಲ್ಲೆ » ಸೆ. 06ರಂದು “ವಿದೇಶದಲ್ಲಿ ಅಧ್ಯಯನ-2026” ಅಭ್ಯರ್ಥಿಗಳು ಭಾಗವಹಿಸಲು ಕರೆ

ಸೆ. 06ರಂದು “ವಿದೇಶದಲ್ಲಿ ಅಧ್ಯಯನ-2026” ಅಭ್ಯರ್ಥಿಗಳು ಭಾಗವಹಿಸಲು ಕರೆ

ಬೀದರ, ಆಗಸ್ಟ್. 29 (ಕರ್ನಾಟಕ ವಾರ್ತೆ) : ಕರ್ನಾಟಕ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ನಿಗಮವು ಅಂತರಾಷ್ಟ್ರೀಯ ನೇಮಕಾತಿ ಏಜೆನ್ಸಿಯಾಗಿ ಕಾರ್ಯನಿರ್ವಹಿಸುತ್ತಿದ್ದು ರಾಜ್ಯದ ವಿದ್ಯಾರ್ಥಿಗಳಿಗೆ ಜಾಗತಿಕ ಉನ್ನತ ಶಿಕ್ಷಣದ ಅವಕಾಶಗಳನ್ನು ಪರಿಚಯಿಸುವ ಉದ್ದೇಶದಿಂದ ದಿನಾಂಕ:06.09.2026 ರಂದು “ವಿದೇಶದಲ್ಲಿ ಅಧ್ಯಯನ-2026” ಕಾರ್ಯಕ್ರಮವನ್ನು ಬೆಂಗಳೂರಿನ ಅರಮನೆ ಮೈದಾನ, ಗಾಯತ್ರಿ ವಿಹಾರ, ಗಾಯತ್ರಿ ಗ್ರಾಂಡ್, ಗೇಟ್ ನಂ.4ರಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ 10ಕ್ಕೂ ಹೆಚ್ಚು ದೇಶಗಳ 75ಕ್ಕೂ ಹೆಚ್ಚು ವಿಶ್ವವಿದ್ಯಾನಿಲಯಗಳು ಭಾಗವಹಿಸುತ್ತಿದ್ದು, ಉನ್ನತ ಶಿಕ್ಷಣಕ್ಕಾಗಿ ವಿದೇಶಿಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ವಿದೇಶಿ ಅಧ್ಯಯನದ ಅವಕಾಶಗಳು, ಪ್ರವೇಶ ಪ್ರಕ್ರಿಯೆಗಳು, ವಿದ್ಯಾರ್ಥಿ ವೀಸಾ ಮಾಹಿತಿ, ಮತ್ತು ವಿದ್ಯಾರ್ಥಿವೇತನದ ಬಗ್ಗೆ ಮಾಹಿತಿಯನ್ನು ಒದಗಿಸಲು ಉದ್ದೇಶಿಸಲಾಗಿದ್ದು, ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಮತ್ತು ಆಸಕ್ತ ಅಭ್ಯರ್ಥಿಗಳು  https://studyabroad.ksdckarnataka.com  ಈ ವೆಬ್‌ಸೈಟ್ ಮೂಲಕ ದಿನಾಂಕ 06.09.2026ರೊಳಗಾಗಿ ನೊಂದಾಯಿಸಿಕೊAಡು ಭಾಗವಹಿಸಬಹುದಾಗಿದೆ ಎಂದು ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This