ದೇಶಾದ್ಯಂತ ಇರುವ ಕೇಂದ್ರೀಯ ವಿದ್ಯಾಲಯಗಳಲ್ಲಿ (KV) 2026-27ನೇ ಶೈಕ್ಷಣಿಕ ವರ್ಷದ ಪ್ರವೇಶಕ್ಕಾಗಿ ಅಧಿಕೃತ ಅಧಿಸೂಚನೆ ಪ್ರಕಟವಾಗಿದೆ. ಒಂದನೇ ತರಗತಿ ಹಾಗೂ ನರ್ಸರಿ ಪ್ರವೇಶಕ್ಕಾಗಿ ಆನ್ಲೈನ್ ಅರ್ಜಿ ಸಲ್ಲಿಕೆ ಮಾರ್ಚ್ 20ರಂದು ಬೆಳಿಗ್ಗೆ 10 ಗಂಟೆಯಿಂದ ಆರಂಭವಾಗಿದೆ. ಆಸಕ್ತ ಪೋಷಕರು ಏಪ್ರಿಲ್ 2ರೊಳಗೆ ಅರ್ಜಿ ಸಲ್ಲಿಸಬೇಕು.
ವಯೋಮಿತಿ ಮತ್ತು ಆದ್ಯತೆ ಒಂದನೇ ತರಗತಿಗೆ ಅರ್ಜಿ ಸಲ್ಲಿಸುವ ಮಕ್ಕಳಿಗೆ ಮಾರ್ಚ್ 31, 2026ರೊಳಗೆ ಕನಿಷ್ಠ 6 ವರ್ಷ ವಯಸ್ಸು ಪೂರ್ಣವಾಗಿರಬೇಕು.
ಪ್ರವೇಶದಲ್ಲಿ ಕೇಂದ್ರ ಸರ್ಕಾರಿ ನೌಕರರು ಮತ್ತು ರಕ್ಷಣಾ ಸಿಬ್ಬಂದಿಯ ಮಕ್ಕಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಉಳಿದ ಸೀಟುಗಳನ್ನು ಮೀಸಲಾತಿ ನಿಯಮಗಳ ಪ್ರಕಾರ ಹಂಚಲಾಗುತ್ತದೆ.
ಆಯ್ಕೆ ಪಟ್ಟಿ ವಿವರ • ನರ್ಸರಿ/ಕಿಂಡರ್ಗಾರ್ಟನ್ – ಏಪ್ರಿಲ್ 8
• ಒಂದನೇ ತರಗತಿ – ಏಪ್ರಿಲ್ 9
• ಎರಡನೇ ಪಟ್ಟಿ – ಏಪ್ರಿಲ್ 16
• ಮೂರನೇ ಪಟ್ಟಿ – ಏಪ್ರಿಲ್ 21
ಇತರೆ ತರಗತಿಗಳ ಪ್ರವೇಶ 2ರಿಂದ 9ನೇ ತರಗತಿಯವರೆಗೆ (11ನೇ ತರಗತಿ ಹೊರತುಪಡಿಸಿ) ಪ್ರವೇಶಕ್ಕೆ ಏಪ್ರಿಲ್ 2ರಿಂದ 8ರವರೆಗೆ ಆಫ್ಲೈನ್ ಅರ್ಜಿ ಸಲ್ಲಿಕೆ ನಡೆಯಲಿದೆ.
ಆಯ್ಕೆ ಪಟ್ಟಿ ಏಪ್ರಿಲ್ 13ರಂದು ಪ್ರಕಟವಾಗಲಿದ್ದು, ಪ್ರವೇಶಾತಿ ಪ್ರಕ್ರಿಯೆ ಏಪ್ರಿಲ್ 15ರಿಂದ 20ರವರೆಗೆ ನಡೆಯಲಿದೆ.
11ನೇ ತರಗತಿ ಪ್ರವೇಶ 10ನೇ ತರಗತಿಯ ಫಲಿತಾಂಶ ಪ್ರಕಟವಾದ 10 ದಿನಗಳ ಬಳಿಕ 11ನೇ ತರಗತಿ ನೋಂದಣಿ ಪ್ರಾರಂಭವಾಗುತ್ತದೆ.
ಅಂತಿಮ ದಿನಾಂಕ ಪ್ರವೇಶಾತಿ ಪ್ರಕ್ರಿಯೆ ಜೂನ್ 30ರವರೆಗೆ ನಡೆಯಲಿದ್ದು, ವಿಶೇಷ ಸಂದರ್ಭಗಳಲ್ಲಿ ಜುಲೈ 7ರವರೆಗೆ ವಿಸ್ತರಣೆ ಸಾಧ್ಯ.
ಗಮನಿಸಿ ಗುಣಮಟ್ಟದ ಶಿಕ್ಷಣಕ್ಕಾಗಿ ಪ್ರಸಿದ್ಧವಾಗಿರುವ ಕೇಂದ್ರೀಯ ವಿದ್ಯಾಲಯಗಳಲ್ಲಿ ನಿಮ್ಮ ಮಗುವಿಗೆ ಸೀಟು ಪಡೆಯಲು ಈ ಪ್ರಮುಖ ದಿನಾಂಕಗಳನ್ನು ತಪ್ಪದೇ ಗಮನಿಸಿ.







