Home » Uncategorized » ಔರಾದ: ಅಂಗನವಾಡಿ ಕೇಂದ್ರಗಳ ಆಹಾರ ಪೂರೈಕೆಯಲ್ಲಿ
ಭ್ರಷ್ಟಾಚಾರ ಪ್ರಕರಣ ಕುರಿತು ಪತ್ರಿಕೆಗಳಲ್ಲಿ ಬಂದಿರುವ ಸುದ್ದಿಗಳಿಗೆ ಸ್ಪಷ್ಟೀಕರಣ

ಔರಾದ: ಅಂಗನವಾಡಿ ಕೇಂದ್ರಗಳ ಆಹಾರ ಪೂರೈಕೆಯಲ್ಲಿ
ಭ್ರಷ್ಟಾಚಾರ ಪ್ರಕರಣ ಕುರಿತು ಪತ್ರಿಕೆಗಳಲ್ಲಿ ಬಂದಿರುವ ಸುದ್ದಿಗಳಿಗೆ ಸ್ಪಷ್ಟೀಕರಣ

ಬೀದರ, ಮಾರ್ಚ.23 (ಕರ್ನಾಟಕ ವಾರ್ತೆ):- ಸರ್ಕಾರದ ಆದೇಶ ಹಾಗೂ ಜಿಲ್ಲಾಧಿಕಾರಿಗಳು ಕಾಲಕಾಲಕ್ಕೆ ನಿಗದಿಪಡಿಸಿದ ಮೆನುವಿನಂತೆ ಅಂಗನವಾಡಿ ಕೇಂದ್ರಗಳಿಗೆ ಆಹಾರ ಸಾಮಗ್ರಿಗಳನ್ನು ಸರಬರಾಜು ಮಾಡಲಾಗಿರುತ್ತದೆ. ಸದರಿ ಆದೇಶದಲ್ಲಿ ನಿಗದಿಪಡಿಸಲಾಗಿರುವ ದರದಂತೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಆಹಾರ ಸಾಮಗ್ರಿಗಳನ್ನು ಎಮ್.ಎಸ್.ಪಿ.ಸಿ.ಕೇಂದ್ರಗಳಿAದ ಖರೀದಿಸುವಂತೆ ಸೂಚಿಸಲಾಗಿರುತ್ತದೆ. ಅಲ್ಲದೇ ಮುಖ್ಯ ಆಹಾರ ವಿಶ್ಲೇಷಕರು, ವಿಭಾಗೀಯ ಆಹಾರ ಪ್ರಯೋಗಾಲಯ, ಕಲಬುರಗಿ ವಿಭಾಗ ಅವರಿಂದ ಪ್ರತಿ ತಿಂಗಳು ವಿಶ್ಲೇಷಣೆ ಮಾಡಿಸಿ ಆಹಾರ ಸಾಮಗ್ರಿಗಳು ಉತ್ತಮ ಗುಣಮಟ್ಟ ಎಂದು ಖಾತ್ರಿಯಾದ ನಂತರವೇ ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಮಾಡಲಾಗಿರುತ್ತದೆ. ಹಾಗಾಗಿ ಅಂಗನವಾಡಿ ಕೇಂದ್ರಗಳಿಗೆ ಉತ್ತಮ ಗುಣಮಟ್ಟದ ಆಹಾರ ಸಾಮಗ್ರಿಗಳು ಸರಬರಾಜು ಆಗಿರುತ್ತದೆ. ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಮಾಡಲಾದ ಆಹಾರ ಸಾಮಗ್ರಿಗಳನ್ನು ಸುಂದ್ರಮ್ಮ ಟ್ರೇಡಿಂಗ್ ಕಂಪನಿಯವರಿAದ ಖರೀದಿಸುವಂತೆ ಶಾಸಕರಿಂದ ಯಾವುದೇ ನಿರ್ದೇಶನ ಈ ಕಚೇರಿಗೆ ಸ್ವೀಕೃತವಾಗಿರುವುದಿಲ್ಲ ಹಾಗೂ ಪ್ರಭು ಟ್ರೇರ‍್ಸ್ ಮತ್ತು ಸುಂದ್ರಮಮ್ಮ ಟ್ರೇಡಿಂಗ್ ಕಂಪನಿ ನಡುವಿನ ವ್ಯವಹಾರದ ಬಗ್ಗೆ ಕಚೇರಿಗೆ ಯಾವುದೇ ಸಂಬAಧ ಇರುವುದಿಲ್ಲವೆಂದು ಸಂತಪೂರ (ಔರಾದ) ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This