Home » ಇತ್ತೀಚಿನ ಸುದ್ದಿ » 893ನೇ ಬಸವ ಜಯಂತಿ: ಔರಾದ್‌ನಲ್ಲಿ ಸರಳ ಹಾಗೂ ಅರ್ಥಪೂರ್ಣ ಆಚರಣೆ

893ನೇ ಬಸವ ಜಯಂತಿ: ಔರಾದ್‌ನಲ್ಲಿ ಸರಳ ಹಾಗೂ ಅರ್ಥಪೂರ್ಣ ಆಚರಣೆ

ಔರಾದ್, ಏಪ್ರಿಲ್ 20: ಜಗಜ್ಯೋತಿ ಬಸವೇಶ್ವರರ 893ನೇ ಜಯಂತಿಯ ಅಂಗವಾಗಿ ಔರಾದ್ ಪಟ್ಟಣದ ಜನಸಂಪರ್ಕ ಕಾರ್ಯಾಲಯದಲ್ಲಿ ಇಂದು ಅರ್ಥಪೂರ್ಣ ಹಾಗೂ ಸಮಾಜಮುಖಿ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಹಮ್ಮಿಕೊಳ್ಳಲಾಯಿತು. ಬಸವಣ್ಣನವರ ಸಮಾನತೆ, ಶ್ರಮದ ಗೌರವ ಹಾಗೂ ಧರ್ಮನಿಷ್ಠ ಜೀವನದ ಅಮೂಲ್ಯ ಸಂದೇಶಗಳನ್ನು ಸ್ಮರಿಸುತ್ತಾ ಕಾರ್ಯಕ್ರಮವನ್ನು ಭಕ್ತಿಭಾವದಿಂದ ಆಚರಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಡಾ. ವೈಜೀನಾಥ್ ಪುಟ್ಟೇ ಅವರು ಬಸವೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ನಂತರ
ಕಾರ್ಯಕ್ರಮದ ವೇಳೆ ಸಾರ್ವಜನಿಕರಿಗೆ ಹಣ್ಣು ಮತ್ತು ಕುಡಿಯುವ ನೀರನ್ನು ವಿತರಿಸುವ ಮೂಲಕ ಮಾನವೀಯತೆ ಹಾಗೂ ಸೇವಾ ಮನೋಭಾವವನ್ನು ಪ್ರತಿಬಿಂಬಿಸಲಾಯಿತು. ತೀವ್ರ ಬಿಸಿಲಿನ ನಡುವೆಯೂ ಜನರ ದಾಹ ನೀಗಿಸುವ ಉದ್ದೇಶದಿಂದ ಈ ಸೇವಾ ಕಾರ್ಯವನ್ನು ಆಯೋಜಿಸಲಾಗಿದ್ದು, ಸ್ಥಳೀಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಈ ಸಂದರ್ಭದಲ್ಲಿ “ಬಸವಣ್ಣ ನವರ್ ಜಯವಾಗಲಿ”, “ಜೈ ಭೀಮ್” ಎಂಬ ಘೋಷಣೆಗಳು ಮೊಳಗಿದವು. ಕಾರ್ಯಕ್ರಮದಲ್ಲಿ ಜನಸಂಪರ್ಕ ಕಾರ್ಯಾಲಯದ ಶ್ರೀ ರಾಹುಲ ಖಂದಾರೆ, ಶ್ರೀ ಸಂತೋಷ್ ಶಿಂದೆ, ಶ್ರೀ ಪ್ರವೀಣ್ ಕಾರಂಜೆ, ಶ್ರೀ ಬಸವರಾಜ ಕಾಂಬ್ಳೆ, ಶ್ರೀ ಸಂತೋಷ್ ಸೂರ್ಯವಂಶಿ, ಶ್ರೀ ದಿನೇಶ್ ಶಿಂದೆ, ಶ್ರೀ ಸತ್ಯಪಾಲ ವಾಘಮಾರೆ, ಶ್ರೀ ಅನಿಲ ಭುಜಂಗೆ ಸೇರಿದಂತೆ ಹಲವರು ಹಾಗೂ ಸ್ಥಳೀಯ ನಾಗರಿಕರು, ಬಸವಣ್ಣನವರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದರು.
ಬಸವಣ್ಣನವರ ಆದರ್ಶಗಳು ಇಂದಿನ ಸಮಾಜಕ್ಕೆ ದಾರಿದೀಪವಾಗಿದ್ದು, ಇಂತಹ ಸೇವಾಮೂಲಕ ಕಾರ್ಯಕ್ರಮಗಳು ಸಹೋದರತ್ವ, ಸಮಾನತೆ ಹಾಗೂ ಮಾನವೀಯ ಮೌಲ್ಯಗಳನ್ನು ಬಲಪಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಉಪಸ್ಥಿತರಿದ್ದ ಗಣ್ಯರು ಅಭಿಪ್ರಾಯಪಟ್ಟರು.

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This