Home » Uncategorized » ರಿಯಾಯಿತಿ ದರದಲ್ಲಿ ಲಿಡಕರ್ ವಸ್ತುಗಳ ಮಾರಾಟ

ರಿಯಾಯಿತಿ ದರದಲ್ಲಿ ಲಿಡಕರ್ ವಸ್ತುಗಳ ಮಾರಾಟ

ಬೀದರ, ಏಪ್ರಿಲ್.30 (ಕರ್ನಾಟಕ ವಾರ್ತೆ):- ಡಾ.ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ (ಲಿಡಕರ್) ವತಿಯಿಂದ ಕಾರ್ಮಿಕ ದಿನಾಚರಣೆ ಹಾಗೂ ಬಕ್ರೀದ್ ಹಬ್ಬದ ಪ್ರಯುಕ್ತ ದಿನಾಂಕ: 29-04-2026 ರಿಂದ 31-05-2026 ರವರೆಗೆ ಚರ್ಮದ ವಸ್ತುಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ನೂತನ ಲಿಡಕರ್ ಮಾರಾಟ ಮಳಿಗೆಗೆ ಲಿಡಕರ್ ನಿಗಮದ ಅಧ್ಯಕ್ಷ ಮುಂಡರಿಗಿ ನಾಗರಾಜ ಭೇಟಿ ನೀಡಿ ನೀಡಿದ್ದಾರೆ.
ಹೊಸ ಮಾದರಿಯ ಪುರುಷ ಮತ್ತು ಮಹಿಳೆಯರ ಪಾದರಕ್ಷೆ, ಶೂ ಹಾಗೂ ಬೆಲ್ಟ್, ಪರ್ಸ ಹಾಗೂ ಬ್ಯಾಗುಗಳ, ಬ್ರೀಫ್‌ಕೇಸ್, ಶಾಲಾ ಬೂಟ್ ಬ್ಯಾಗಗಳು ಶೇ.15% ರಿಯಾಯಿತಿ ದರದಲ್ಲಿ ಲಭ್ಯವಿರುತ್ತವೆ. ಗ್ರಾಹಕರು ಡಾ.ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ, ಲಿಡಕರ್ ಮಾರಾಟ ಮಳಿಗೆ, ತಹಸೀಲ್ ಕಾರ್ಯಾಲಯ ಎದುರುಗಡೆ, ಕೋರ್ಟ ರಸ್ತೆ, ಸಿ.ಎಂ.ಸಿ. ಕಾಂಪ್ಲೇಕ್ಸ್, ಬೀದರ ಇಲ್ಲಿಗೆ ಭೇಟಿ ನೀಡಿ ಖರೀದಿಸಬಹುದಾಗಿದೆ ಎಂದು ಬೀದರ ಲಿಡಕರ್ ಮಾರಾಟ ಮಳಿಗೆಯ ಜಿಲ್ಲಾ ಸಂಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This