ಬೀದರ, ಫೆಬ್ರವರಿ.27 (ಕರ್ನಾಟಕ ವಾರ್ತೆ):- ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬೀದರನ 15ನೇ ಘಟಿಕೋತ್ಸವವನ್ನು ಫೆಬ್ರವರಿ.27 ರಂದು ಬೆಳಿಗ್ಗೆ 10 ಗಂಟೆಗೆ ವಿಶ್ವವಿದ್ಯಾಲಯದ ಆಡಿಟೊರಿಯಂ, ನಂದಿನಗರ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೋ. ಕೆ. ಸಿ. ವೀರಣ್ಣ ಹೇಳಿದರು.
ಅವರು ಗುರವಾರ ನಗರದ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆಡಳಿತ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.
ರಾಜ್ಯಪಾಲರು ಹಾಗೂ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಶ್ರೀ ಥಾವರ್ಚಂದ್ ಗೆಹ್ಲೋಟ್ ಅವರು 15ನೇ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ, ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಿದ್ದಾರೆ. ಅತಿಥಿಗಳಾಗಿ ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು ಹಾಗೂ ವಿಶ್ವವಿದ್ಯಾಲಯದ ಸಹಕುಲಾಧಿಪತಿಗಳಾದ ಕೆ. ವೆಂಕಟೇಶ, ಮುಖ್ಯ ಅಥಿಗಳಾಗಿ ಇಕ್ರಿಸ್ಯಾಟ್, ಹೈದ್ರಾಬಾದನ ಮಹಾನಿರ್ದೇಶಕ ಡಾ. ಹಿಮಾಂಶು ಪಾಠಕ ಭಾಗವಹಿಸಲಿದ್ದಾರೆ.
ಘಟಿಕೋತ್ಸವದಲ್ಲಿ ಒಟ್ಟು 576 ವಿದ್ಯಾರ್ಥಿಗಳಿಗೆ ಪದವಿಯನ್ನು ಪ್ರದಾನ ಮಾಡಲಾಗುತ್ತಿದ್ದು, ಇದರಲ್ಲಿ 455 ಸ್ನಾತಕ ಪದವೀಧರರು, 107 ಸ್ನಾತಕೋತ್ತರ ಹಾಗೂ 14 ಡಾಕ್ಟರೇಟ್ ಪದವಿಧರರು ಸೇರಿದ್ದಾರೆ. ಘಟಿಕೋತ್ಸವದ ದಿನದಂದು 94 ಪದವೀಧರರು ಉಪಸ್ಥಿತರಾಗಿ ಪದವಿ ಪಡೆಯುತ್ತಿದ್ದಾರೆ. ಅದೇ ರೀತಿ ಒಟ್ಟು 34 ಪ್ರತಿಭಾನ್ವಿತ ಸ್ನಾತಕ, ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಪದವಿಧರರಿಗೆ ಚಿನ್ನದ ಪದಕಗಳನ್ನು ನೀಡಿ ಗೌರವಿಸಲಾಗುತ್ತಿದೆ. ಅದರಲ್ಲಿ 21 ವಿಶ್ವವಿದ್ಯಾಲಯದ ಪದಕಗಳು ಮತ್ತು 60 ಪ್ರಾಯೋಜಿತ ಚಿನ್ನದ ಪದಕಗಳಾಗಿವೆ ಎಂದು ಹೇಳಿದರು.
ಸ್ನಾತಕ ಪದವಿಯಲ್ಲಿ 17 ವಿದ್ಯಾರ್ಥಿಗಳು- 49 ಚಿನ್ನದ ಪದಕಗಳು ಪಡೆಯಲಿದ್ದಾರೆ ಇದರಲ್ಲಿ ಶಿವಮೊಗ್ಗದ ಖುಷಿ 16 ಚಿನ್ನದ ಪದಕ, ಬೀದರನ ದೇವರಾಜ್ 4 ಪದಕ ಸೇರಿದಂತೆ ಇತರೆ ವಿದ್ಯಾರ್ಥಿಗಳು ಪದಕ ಪಡೆದಿದ್ದಾರೆ. ಸ್ನಾತಕೋತ್ತರ ಪದವಿಯಲ್ಲಿ 15 ವಿದ್ಯಾರ್ಥಿಗಳು 30 ಚಿನ್ನದ ಪದಕ, ಡಾಕ್ಟರೇಟ್ ಪದವಿಯಲ್ಲಿ 2 ವಿದ್ಯಾರ್ಥಿಗಳು 2 ಚಿನ್ನದ ಪದಗಳನ್ನು ಪಡೆದಿದ್ದಾರೆಂದರು.
ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ 9 ಮಹಾವಿದ್ಯಾಲಯಗಳಿವೆ. ನೂತನವಾಗಿ ಪುತ್ತೂರಿನಲ್ಲಿ ಒಂದು ಪಶುವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆ ಕಾರ್ಯ ಪ್ರಾರಂಭದಲ್ಲಿದೆ. ರೈತರ ಆದಾಯ ದ್ವಿಗುಣಗೊಳಿಸಲು ಮತ್ತು ಉತ್ಪಾದನೆ ಹೆಚ್ಚಿಸುವ ಉದ್ದಶದಿಂದ ಹತ್ತು ಸಂಶೋಧನೆ ಹಾಗೂ ಮಾಹಿತಿ ಕೇಂದ್ರಗಳು ಕೆಲಸ ಮಾಡುತ್ತಿವೆ. ವಿವಿಧ ಸಂಸ್ಥೆಗಳಿAದ ಧನಸಹಾಯ ಪಡೆದು ಸಂಶೋಧನೆ ಕೈಗೊಳ್ಳಲಾಗುತ್ತಿದೆ. ಪಶುವೈದ್ಯಕೀಯ ವಿಜ್ಞಾನ ಕ್ಷೇತ್ರದ ವಿಜ್ಞಾನಿಗಳು ಮಾನವ ಮತ್ತು ಪ್ರಾಣಿಗಳ ಮೇಲೆ ಗಂಭೀರ ಪರಿಣಾಮ ಬೀರುವ ಬ್ರುಸಲೋಸಿಸ್, ರೆಬಿಸ್, ಎವಿಯನ್ ಇನ್ನು ಎಂಜಾ, ಅಂತ್ರಾಕ್ಸ್ ಮತ್ತು ಏಈಆ ಮೇಲೆ ಹೊಸ ಸಂಶೋಧನಾ ಯೋಜನೆಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಹಾವಿನ ‘ಆಂಟಿ-ವೆನಮ್’ ತಯ್ಯಾರಿಸುವ ಕೆಲಸ ಸಹ ಪ್ರಗತಿಯಲ್ಲಿದೆ ಎಂದರು.
ಈ ಪತ್ರಿಕಾಗೊಷ್ಟಿಯಲ್ಲಿ ವಿಶ್ವವಿದ್ಯಾಲಯ ಕುಲಸಚಿವ ಪ್ರೋ. ಪಿ.ಟಿ ರಮೇಶ್, ಪ್ರಮುಖರಾದ ಡಾ. ಮಂಜುನಾಥ್, ರಾಮಚಂದ್ರ ನಾಯಕ, ಶಿವಪ್ರಕಾಶ್, ಸೇರಿದಂತೆ ವ್ಯವಸ್ಥಾಪಕ ಮಂಡಳಿ ಸೇರಿದಂತೆ ವಿದ್ಯಾ ವಿಷಯ ಪರಿಷತ್ ಸದಸ್ಯರು ಉಪಸ್ಥಿತರಿದ್ದರು.







