Home » ಬೀದರ » ಇಂದು ಮತ್ತು ನಾಳೆ ಅರಣ್ಯ ಸಚಿವರಾದ
ಈಶ್ವರ ಬಿ.ಖಂಡ್ರೆ ಅವರ ಬೀದರ ಜಿಲ್ಲಾ ಪ್ರವಾಸ

ಇಂದು ಮತ್ತು ನಾಳೆ ಅರಣ್ಯ ಸಚಿವರಾದ
ಈಶ್ವರ ಬಿ.ಖಂಡ್ರೆ ಅವರ ಬೀದರ ಜಿಲ್ಲಾ ಪ್ರವಾಸ

ಬೀದರ, ಮಾರ್ಚ.13 (ಕರ್ನಾಟಕ ವಾರ್ತೆ):- ಅರಣ್ಯ, ಜೀವಿಶಾಸ್ತç ಮತ್ತು ಪರಿಸರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ.ಖಂಡ್ರೆ ಅವರು ಮಾರ್ಚ್.14 ಮತ್ತು 15 ರಂದು ಬೀದರ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿರುತ್ತಾರೆ.
ಮಾರ್ಚ್.14 ರಂದು ಬೆಳಿಗ್ಗೆ 6 ಗಂಟೆಗೆ ಕೆಂಪೇಗೌಡ ಅಂತರರಾಷ್ಟಿçÃಯ ವಿಮಾನ ನಿಲ್ದಾಣದಿಂದ ಸ್ಟಾರ್ ಏರ್ ಎಸ್5-159 ವಿಮಾನದ ಮೂಲಕ ಹೊರಟು ಬೆಳಿಗ್ಗೆ 7.15ಕ್ಕೆ ಬೀದರ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಬೆಳಿಗ್ಗೆ 8 ರಿಂದ ಬೆಳಿಗ್ಗೆ 10.55 ರವರೆಗೆ ಬೀದರ್ ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಬೆಳಿಗ್ಗೆ 11ಕ್ಕೆ ಬೀದರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಬೇಸಿಗೆ ಎದುರಿಸಲು ಜಿಲ್ಲಾಡಳಿತದ ಪೂರ್ವ ತಯ್ಯಾರಿ ಕುರಿತು ಸಭೆ ನಡೆಸಲಿದ್ದಾರೆ. ಸಂಜೆ 5 ಗಂಟೆಗೆ ಬೀದರ್ ರಸ್ತೆ ಮೂಲಕ ಭಾಲ್ಕಿಗೆ ಪ್ರಯಾಣಿಸಿ ಸಂಜೆ 6 ಗಂಟೆಗೆ ಭಾಲ್ಕಿಯ ಕಾಲಿ ಮಜೀದನಲ್ಲಿ ಆಯೋಜಿಸಿರುವ ಇಫ್ತಾರ್ ಕೂಟದಲ್ಲಿ ಭಾಗವಹಿಸಲಿದ್ದಾರೆ. ನಂತರ ಭಾಲ್ಕಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಮಾರ್ಚ್.15 ರಂದು ಬೆಳಿಗ್ಗೆ 9 ಗಂಟೆಗೆ ಭಾಲ್ಕಿ ರಸ್ತೆ ಮೂಲಕ ಬೀದರ್‌ಗೆ ಪ್ರಯಾಣಿಸಿ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ಬೀದರ್ ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಸಂಜೆ 6 ಗಂಟೆಗೆ ಬೀದರ್ ರಸ್ತೆ ಮೂಲಕ ಭಾಲ್ಕಿಗೆ ಪ್ರಯಾಣಿಸಿ ಅಲ್ಲಿಯೇ ವಾಸ್ತವ್ಯ ಮಾಡಲಿದ್ದಾರೆಂದು ಸಚಿವರ ಆಪ್ತ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This