ನವದೆಹಲಿ: ಅಸಂಘಟಿತ ವಲಯದ ಕಾರ್ಮಿಕರಿಗೆ ಕೇಂದ್ರ ಸರ್ಕಾರದ ಇ-ಶ್ರಮ್ ಕಾರ್ಡ್ ಯೋಜನೆ 2026ರಲ್ಲಿ ಮತ್ತಷ್ಟು ಬಲಿಷ್ಠಗೊಂಡಿದೆ. ದೇಶಾದ್ಯಂತ ಈಗಾಗಲೇ 31.54 ಕೋಟಿಗೂ ಹೆಚ್ಚು ಕಾರ್ಮಿಕರು ನೋಂದಾಯಿಸಿಕೊಂಡಿದ್ದಾರೆ.
ಈ ಯೋಜನೆಯಡಿ 60 ವರ್ಷ ಬಳಿಕ ಪ್ರತಿ ತಿಂಗಳು ₹3,000 ಪಿಂಚಣಿ (PM-SYM), ಅಪಘಾತದಲ್ಲಿ ₹2 ಲಕ್ಷ ವಿಮೆ, ತುರ್ತು ಸಂದರ್ಭದಲ್ಲಿ ನೇರ DBT ನೆರವು ಹಾಗೂ ಆಯುಷ್ಮಾನ್ ಭಾರತ್ ಆರೋಗ್ಯ ಸೌಲಭ್ಯ ದೊರೆಯಲಿದೆ.
18ರಿಂದ 59 ವರ್ಷ ವಯಸ್ಸಿನ, EPFO/ESIC ಸದಸ್ಯರಲ್ಲದ ಮತ್ತು ಆದಾಯ ತೆರಿಗೆ ಪಾವತಿಸದ ಕಾರ್ಮಿಕರು eshram.gov.in ಅಥವಾ UMANG ಆಪ್ ಮೂಲಕ ಉಚಿತವಾಗಿ ನೋಂದಣಿ ಮಾಡಬಹುದು. ವರ್ಷಕ್ಕೊಮ್ಮೆ e-KYC ಅಪ್ಡೇಟ್ ಮಾಡುವುದು ಕಡ್ಡಾಯ.







