Home » Uncategorized » ಏಪತೈದು ವರ್ಷ ವಯಸ್ಸಿನ ಮೇಲ್ಪಟ್ಟವರ ಮನೆ ಮನೆಗೆ ಪಡಿತರ
ಧಾನ್ಯ ವಿತರಿಸಲು ಕ್ರಮಕೈಗೊಳ್ಳಿ-ಅಮೃತರಾವ ಚಿಮಕೋಡೆ

ಏಪತೈದು ವರ್ಷ ವಯಸ್ಸಿನ ಮೇಲ್ಪಟ್ಟವರ ಮನೆ ಮನೆಗೆ ಪಡಿತರ
ಧಾನ್ಯ ವಿತರಿಸಲು ಕ್ರಮಕೈಗೊಳ್ಳಿ-ಅಮೃತರಾವ ಚಿಮಕೋಡೆ

ಬೀದರ, ಮಾರ್ಚ.24 (ಕರ್ನಾಟಕ ವಾರ್ತೆ):- 75 ವರ್ಷ ವಯಸ್ಸಿನ ಮೇಲ್ಪಟ್ಟ ಪಡಿತರ ಫಲಾನುಭವಿಗಳಿಗೆ ಮನೆ ಮನೆಗೆ ಪಡಿತರ ಧಾನ್ಯ ವಿತರಿಸುವ ಕ್ರಮ ಕೈಗೊಳ್ಳುವಂತೆ ಸಂಬAಧಪಟ್ಟ ಅಧಿಕಾರಿಗಳಿಗೆ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಅಮೃತರಾವ ಚಿಮಕೊಡೆ ಸೂಚಿಸಿದರು.
ಅವರು ಮಂಗಳವಾರ ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಾದ ಪಂಚ ಗ್ಯಾರಂಟಿ ಯೋಜನೆಗಳ ಕುರಿತು ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬೇಸಿಗೆ ಕಾಲ ಇರುವುದರಿಂದ ಪಡಿತರ ಧಾನ್ಯ ವಿತರಕರು ತಮ್ಮ ಅಂಗಡಿಗಳ ಮುಂದೆ ಪಡಿತರ ಧಾನ್ಯ ಫಲಾನುಭವಿಗಳಿಗೆ ತೊಂದರೆ ಆಗದಂತೆ ಕುಡಿಯುವ ನೀರು ಮತ್ತು ನೆರಳಿನ ವ್ಯವಸ್ಥೆ ಮಾಡಬೇಕು. ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳಿಸಿ ಫಲಾನುಭವಿಗಳಿಗೆ ತಲುಪುವಂತಾಗಬೇಕೆAದರು.
ಅನ್ನಭಾಗ್ಯ ಯೋಜನೆಯಡಿ ಒಟ್ಟು 13,13,305 ಫಲಾನುಭವಿಗಳಿದ್ದು, 3,57,286 ಪಡಿತರ ಚೀಟಿಗಳಿದ್ದು, ಅಂತ್ಯೋದಯ ಮತ್ತು ಬಿಪಿಎಲ್ ಆದ್ಯತಾ ಪಡಿತರ ಚೀಟಿದಾರರಿಗೆ 1 ಲಕ್ಷ 18 ಸಾವಿರ 80 ಕ್ವಿಂಟಲ್ ಅಕ್ಕಿಯನ್ನು ವಿತರಿಸಲಾಗುತ್ತಿದೆ. ಅಕ್ಟೋಬರ್.2025 ರ ಮಾಹೆಯಿಂದ ಒಟ್ಟು 10 ಕೆ.ಜಿ. ಅಕ್ಕಿಯನ್ನು ಮಾತ್ರ ವಿತರಿಸಲಾಗುತ್ತಿದೆ. ಪ್ರತಿ ಮಾಹೆಯಂತೆ ಮೃತ ಫಲಾನುಭವಿಗಳನ್ನು ಪರಿಶೀಲಿಸುತ್ತಿದ್ದು, ಇಲ್ಲಿಯವರೆಗೆ ಒಟ್ಟು 5004 ಜನ ಮೃತ ಫಲಾನುಭವಿಗಳ ಪಡಿತರ ಕಾರ್ಡ ರದ್ದುಗೊಳಿಸಲಾಗಿದೆ. ಇದರಿಂದ 500 ಕ್ವಿಂಟಲ್ ಅಕ್ಕಿ ಉಳಿತಾಯವಾಗಿದೆ.
ಗೃಹಲಕ್ಷಿö್ಮÃ ಯೋಜನೆಯಡಿಯಲ್ಲಿ 3,29,734 ಫಲಾನುಭವಿಗಳಿದ್ದು, 1751.40 ಕೋಟಿ ರೂ. ಫಲಾನುಭವಿಗಳಿಗೆ ಡಿಬಿಟಿ ಮುಖಾಂತರ ಅವರ ಖಾತೆಗೆ ಜಮಾ ಮಾಡಲಾಗಿದೆ. ಇಲ್ಲಿಯವರೆಗೆ ಮೃತ ವ್ಯಕ್ತಿಗಳ ಪರಿಷ್ಕೃರಣೆ ಮಾಡಲಾಗಿದ್ದು, ಜಿಲ್ಲೆಯಲ್ಲಿ ಒಟ್ಟು 5353 ಮೃತ ಫಲಾನುಭವಿಗಳಿದ್ದು ಮರಣ ಹೊಂದಿದ ಫಲಾನುಭವಿಗಳ ಸೇವಾ ಸಿಂಧು ಲಾಗಿನ್‌ನಲ್ಲಿ ಇಲ್ಲಿಯವರೆಗೆ 2004 ಫಲಾನುಭವಿಗಳ ಅಪಡೇಟ್ ಮಾಡಲಾಗಿದೆ. 3349 ಫಲಾನುಭವಿಗಳು ಮರಣ ಹೊಂದಿರುವ ಫಲಾನುಭವಿಗಳ ಸೇವಾ ಸಿಂಧು ಲಾಗಿನಲ್ಲಿ ಅಪಡೆಟ್ ಮಾಡಬೇಕಾಗಿದೆ. ಈಗಾಗಲೇ ಡಿಸೆಂಬರ್‌ವರೆಗೆ ಗೃಹಲಕ್ಷಿö್ಮÃ ಹಣ ಪಾವತಿಸಲಾಗಿದ್ದು, ಜನೇವರಿ ಮಾಹೆಯ ಗೃಹಲಕ್ಷಿö್ಮÃ ಮೊತ್ತ 2000 ರೂ. 3-4 ದಿನಗಳಲ್ಲಿ ಫಲಾನುಭವಿಗಳ ಖಾತೆಗೆ ಜಮೆ ಆಗಲಿದೆ.
ಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿ ದಿನಾಂಕ: 11-06-2023 ರವರೆಗೆ ಮಹಿಳಾ ಮತ್ತು ಬಾಲಕಿಯರು ಒಟ್ಟು ಸೇರಿ 11.70 ಕೋಟಿ ಜನರು ಈ ಸೌಲಭ್ಯವನ್ನು ಪಡೆದಿರುತ್ತಾರೆ. ಜಿಲ್ಲೆಯಲ್ಲಿ ಪ್ರತಿ ದಿನ ಸರಾಸರಿ 1.16 ಲಕ್ಷ ಮಹಿಳೆಯರು ಪ್ರಯಾಣಿಸುತ್ತಿದ್ದು, 3,45.88 ಕೋಟಿ ಮೊತ್ತ ಇಲಾಖೆಗೆ ಸಂದಾಯವಾಗಿರುತ್ತದೆ.
ಗೃಹಜ್ಯೋತಿ ಯೋಜನೆಯಡಿ 3,29,750 ಫಲಾನುಭವಿಗಳಿದ್ದು, ಫೆಬ್ರವರಿ ಅಂತ್ಯದವರಗೆ 495.80 ಕೋಟಿ ರೂ. ಇಲಾಖೆಗೆ ಹಣ ಸಂದಾಯವಾಗಿದೆ. ಯುವನಿಧಿ ಯೋಜನೆಯಡಿಯಲ್ಲಿ ಪದವಿ 16188, ಡಿಪ್ಲೋಮಾ 408 ಫಲಾನುಭವಿಗಳು ಸೇರಿ ಒಟ್ಟು 16,596 ವಿದ್ಯಾರ್ಥಿಗಳಿಗೆ 40.99 ಹಣ ಅವರ ಖಾತೆಗೆ ಡಿಬಿಟಿ ಮೂಲಕ ಸಂದಾಯ ಮಾಡಲಾಗಿರುತ್ತದೆ ಎಂದರು.
ಜಿಲ್ಲಾ ಪಂಚಾಯತ ಕಾರ್ಯನಿರ್ವಹಣಾ ಅಧಿಕಾರಿ ಡಾ.ಗಿರೀಶ ಬದೋಲೆ ಮಾತನಾಡಿ, ಎಸ್.ಎಸ್.ಎಲ್.ಸಿ. ಪರೀಕ್ಷೆಗಳು ನಡೆಯುತ್ತಿದ್ದು, ಬಸ್ಸುಗಳ ಸರಿಯಾದ ಸಮಯಕ್ಕೆ ಓಡಿಸಿ ವಿದ್ಯಾರ್ಥಿಗಳೀಗೆ ಪರೀಕ್ಷೆ ಬರೆಯಲು ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಶಕ್ತಿ ಹಾಗೂ ಗೃಹಲಕ್ಷಿö್ಮÃ ಯೋಜನೆಗಳಲ್ಲಿ ಪ್ರತಿ ಮಾಹೆವಾರು ಮೃತ ಫಲಾನುಭವಿಗಳ ಕುರಿತು ಪರಿಷ್ಕೃರಣೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಇದೇ ಸಂದರ್ಭದಲ್ಲಿ ಬಸ್ ನಿಲ್ದಾಣಗಳಲ್ಲಿ ಕುಡಿಯುವ ನೀರಿನ ಸೌಲಭ್ಯ, ಶೌಚಾಲಯ ಹಾಗೂ ಕೆಲವು ಕಡೆ ಬಸ್ಸ್ ನಿಲುಗಡೆ ಕುರಿತು ಗ್ಯಾರಂಟಿ ಯೋಜನೆಗಳ ಸದಸ್ಯರು ಸಭೆಗೆ ಮಾಹಿತಿ ನೀಡಿದರು.
ಈ ಸಭೆಯಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಯೋಜನಾಧಿಕಾರಿ ಕಿಶೋರ ದುಬೆ, ಆಹಾರ ಇಲಾಖೆಯ ಉಪನಿರ್ದೇಶಕರಾದ ಪ್ರವೀಣ ಬರಗಲ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಶ್ರೀಧರ ಸೇರಿದಂತೆ ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷರು, ತಾಲ್ಲೂಕಾಧ್ಯಕ್ಷರು, ಸದಸ್ಯರುಗಳು ಹಾಗೂ ಇನ್ನಿತರ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This