Home » ಬೀದರ » ಔರಾದದಲ್ಲಿ ಕನ್ಷಿರಾಮ್ ಜಿ ಜಯಂತಿ: ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ವಿತರಣೆ

ಔರಾದದಲ್ಲಿ ಕನ್ಷಿರಾಮ್ ಜಿ ಜಯಂತಿ: ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ವಿತರಣೆ

ಔರಾದ, 15 ಮಾರ್ಚ್ 2026: ಔರಾದ ಪಟ್ಟಣದ ಬಹುಜನ ಜನ ಸಂಪರ್ಕ ಕಾರ್ಯಾಲಯದಲ್ಲಿ ಇಂದು ದಿನಾಂಕ 15-03-2026 ರಂದು ಬೆಳಿಗ್ಗೆ 10:30 ಗಂಟೆಗೆ ಬಹುಜನ ಚಳವಳಿಯ ಮಹಾನ್ ಚಿಂತಕ ಹಾಗೂ ಸಮಾಜ ಸುಧಾರಕ ಮಾನ್ಯ ದಾದಾಸಾಹೇಬ್ ಕನ್ಷಿರಾಮ್ ಜಿ ಅವರ 92ನೇ ಜನ್ಮ ದಿನಾಚರಣೆವನ್ನು ಭಕ್ತಿಭಾವದಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕಾರ್ಯಾಲಯದಲ್ಲಿ ದಾದಾಸಾಹೇಬ್ ಕನ್ಷಿರಾಮ್ ಜಿ ಅವರ ಭಾವಚಿತ್ರಕ್ಕೆ ಪುಷ್ಪಮಾಲೆ ಅರ್ಪಿಸಿ ಪೂಜೆ ಸಲ್ಲಿಸಲಾಯಿತು. ಬಳಿಕ ಅವರ ಜೀವನ ಸಾಧನೆಗಳು, ಬಹುಜನ ಸಮಾಜದ ಅಭಿವೃದ್ಧಿಗಾಗಿ ಮಾಡಿದ ಹೋರಾಟ ಹಾಗೂ ಸಮಾಜಕ್ಕೆ ನೀಡಿದ ಮಾರ್ಗದರ್ಶನದ ಕುರಿತು ಮುಖಂಡರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ನಂತರ ಸಮಾಜ ಸೇವೆಯ ಅಂಗವಾಗಿ ಔರಾದ ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ ಮಾಡುವ ಮೂಲಕ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ದಲಿತ ಸಂಘರ್ಷ ಸಮಿತಿಯ ತಾಲೂಕು ಅಧ್ಯಕ್ಷರಾದ ಶ್ರೀ ಸುಭಾಸ್ ಲಾಧಾ, BSI ಅಧ್ಯಕ್ಷರಾದ ಶ್ರೀ ಸೋಪಾನರಾವ್ ಡೊಂಗ್ರೆ, ಹಿರಿಯ ಮುಖಂಡರಾದ ಶ್ರೀ ಗಣಪತಿ ವಾಸುದೇವ, ಕಾರ್ಮಿಕ ಸಂಘದ ಮುಖಂಡರಾದ ಶ್ರೀ ಸಂತೋಷ್ ಶಿಂಧೆ, ಯುವ ಮುಖಂಡರಾದ ಶ್ರೀ ರಾಮ್ ಗೋಡಬೋಲೆ, ಶ್ರೀ ರಾಜಕುಮಾರ್ ಶಿಂಧೆ, ಶ್ರೀ ಮಧುಕರ ಬೇಂದ್ರೆ, ಶ್ರೀ ಲಕ್ಷ್ಮಣ ಕಾಂಬ್ಳೆ, ಶ್ರೀ ಸೂರ್ಯಕಾಂತ ಕಾಲೇಕರ್, ಶ್ರೀ ಕೃಷ್ಣ ದಾಂಡೇಕರ ಸೇರಿದಂತೆ ಅನೇಕ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂತ್ಯದಲ್ಲಿ ದಾದಾಸಾಹೇಬ್ ಕನ್ಷಿರಾಮ್ ಜಿ ಅವರ ಆಶಯಗಳನ್ನು ಸಮಾಜದಲ್ಲಿ ಜಾರಿಗೆ ತರುವಂತೆ ಮತ್ತು ಬಹುಜನರ ಏಕತೆ ಬಲಪಡಿಸುವಂತೆ ಎಲ್ಲರೂ ಸಂಕಲ್ಪ ವ್ಯಕ್ತಪಡಿಸಿದರು.

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This