Home » ಇತ್ತೀಚಿನ ಸುದ್ದಿ » ಕಟ್ಟಡ ಕಾರ್ಮಿಕರಿಗೆ ಉಚಿತ ಸೇವೆ: ಕಲ್ಯಾಣ ಯೋಜನೆಗಳ ಸದುಪಯೋಗಕ್ಕೆ ಸಂಘದ ಕರೆ

ಕಟ್ಟಡ ಕಾರ್ಮಿಕರಿಗೆ ಉಚಿತ ಸೇವೆ: ಕಲ್ಯಾಣ ಯೋಜನೆಗಳ ಸದುಪಯೋಗಕ್ಕೆ ಸಂಘದ ಕರೆ

ಬೀದರ: ಕಲ್ಯಾಣ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಹಾ ಸಂಘದಿಂದ ಬೀದರ ಜಿಲ್ಲೆಯ ಎಲ್ಲಾ ಕಟ್ಟಡ ಕಾರ್ಮಿಕರಿಗೆ ಮಹತ್ವದ ಮಾಹಿತಿ ನೀಡಲಾಗಿದೆ. ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ವಿವಿಧ ರೀತಿಯ ಸಹಾಯಧನ ಮತ್ತು ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ಅವುಗಳ ಸದುಪಯೋಗ ಪಡೆದುಕೊಳ್ಳುವಂತೆ ಸಂಘ ಮನವಿ ಮಾಡಿದೆ.
ಕಾರ್ಮಿಕರಿಗೆ ಲಭ್ಯವಿರುವ ಪ್ರಮುಖ ಸೌಲಭ್ಯಗಳು ಈ ಕೆಳಗಿನಂತಿವೆ:
ಸ್ವಾಭಾವಿಕ ಮರಣ ಸಹಾಯಧನ, ವೈದ್ಯಕೀಯ ಸೌಲಭ್ಯ, ಹೆರಿಗೆ ಸಹಾಯಧನ, ಅಪಘಾತ ಮರಣ ಸಹಾಯಧನ, ಶಾಶ್ವತ ಅಂಗವೈಕಲ್ಯ ಸಹಾಯಧನ, ಶೈಕ್ಷಣಿಕ ಸಹಾಯಧನ, ಮದುವೆ ಸಹಾಯಧನ ಹಾಗೂ ಪಿಂಚಣಿ ಸಹಾಯಧನ.
ಈ ಎಲ್ಲಾ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸಲು ಸಂಘದ ವತಿಯಿಂದ ಯಾವುದೇ ರೀತಿಯ ಸೇವಾ ಶುಲ್ಕ ವಿಧಿಸಲಾಗುವುದಿಲ್ಲ ಎಂದು ಸಂಘ ತಿಳಿಸಿದೆ. ಆದರೆ ನೋಂದಣಿ ಮತ್ತು ನವೀಕರಣ ಶುಲ್ಕಗಳು ಮಾತ್ರ ಅನ್ವಯವಾಗುತ್ತವೆ.
ಜಿಲ್ಲೆಯ ಎಲ್ಲಾ ಕಟ್ಟಡ ಕಾರ್ಮಿಕರು ಸರ್ಕಾರ ನೀಡುತ್ತಿರುವ ಈ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಬೀದರ ಜಿಲ್ಲಾ ಅಧ್ಯಕ್ಷರಾದ ಸೂರ್ಯಕಾಂತ ಸಾದುರೆ ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಸಂತೋಷ ಕೆ. ಶಿಂಧೆ ವಿನಂತಿಸಿದ್ದಾರೆ

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This