ಬೆಂಗಳೂರು: ಕರ್ನಾಟಕ ಹೈಕೋರ್ಟ್ 2026ನೇ ಸಾಲಿನ ನೇಮಕಾತಿ ಅಧಿಸೂಚನೆಯನ್ನು ಅಧಿಕೃತವಾಗಿ ಪ್ರಕಟಿಸಿದ್ದು, ‘ಅಸಿಸ್ಟೆಂಟ್ ಕೋರ್ಟ್ ಸೆಕ್ರೆಟರಿ’ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ನ್ಯಾಯಾಂಗ ಇಲಾಖೆಯಲ್ಲಿ ಸರ್ಕಾರಿ ಉದ್ಯೋಗಕ್ಕಾಗಿ ಎದುರುನೋಡುತ್ತಿರುವ ಪದವೀಧರರಿಗೆ ಇದು ಅತ್ಯುತ್ತಮ ಅವಕಾಶವಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್ 15, 2026 ಎಂದು ತಿಳಿಸಲಾಗಿದೆ.
ಹುದ್ದೆಗಳ ವಿವರ
ಒಟ್ಟು 70 ಹುದ್ದೆಗಳು ಭರ್ತಿ ಮಾಡಲಾಗುತ್ತಿವೆ.
59 ಹುದ್ದೆಗಳು: ಉಳಿಕೆ ಮೂಲ ವೃಂದ (RPC)
11 ಹುದ್ದೆಗಳು: ಕಲ್ಯಾಣ ಕರ್ನಾಟಕ ವೃಂದ (KKR)
ವೇತನ ಶ್ರೇಣಿ
ಆಯ್ಕೆಯಾಗುವ ಅಭ್ಯರ್ಥಿಗಳಿಗೆ 7ನೇ ವೇತನ ಆಯೋಗದ Level-7 ಅನ್ವಯ:
P₹44,900 ರಿಂದ ₹1,42,400 ವರೆಗೆ ಮಾಸಿಕ ವೇತನ
ಜೊತೆಗೆ ಇತರ ಭತ್ಯೆಗಳು
ಶೈಕ್ಷಣಿಕ ಅರ್ಹತೆ
ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ (BA / BSc / BCom / BBA / BCA ಇತ್ಯಾದಿ)
ಇಂಗ್ಲಿಷ್ ಶೀಘ್ರಲಿಪಿ (Shorthand) ಹಾಗೂ ಟೈಪಿಂಗ್ನಲ್ಲಿ Senior Grade / Proficiency
ಅಥವಾ
ಕಮರ್ಷಿಯಲ್ / ಸೆಕ್ರೆಟರಿಯಲ್ ಪ್ರಾಕ್ಟೀಸ್ ಡಿಪ್ಲೊಮಾ
ಕನಿಷ್ಠ ಕಂಪ್ಯೂಟರ್ ಜ್ಞಾನ ಕಡ್ಡಾಯ
ವಯೋಮಿತಿ
ಕನಿಷ್ಠ: 18 ವರ್ಷ
ಗರಿಷ್ಠ:
ಸಾಮಾನ್ಯ ವರ್ಗ: 40 ವರ್ಷ
OBC (2A, 2B, 3A, 3B): 43 ವರ್ಷ
SC/ST/ಪ್ರವರ್ಗ-1: 45 ವರ್ಷ
ಅರ್ಜಿ ಶುಲ್ಕ
ಸಾಮಾನ್ಯ / OBC: ₹500
SC/ST / ಪ್ರವರ್ಗ-1 / ವಿಕಲಚೇತನ: ₹250
ಆಯ್ಕೆ ಪ್ರಕ್ರಿಯೆ
100 ಅಂಕಗಳ ಶೀಘ್ರಲಿಪಿ ಪರೀಕ್ಷೆ
20 ಅಂಕಗಳ ಸಂದರ್ಶನ
ಅರ್ಜಿ ಸಲ್ಲಿಸುವ ವಿಧಾನ
ಆಸಕ್ತ ಅಭ್ಯರ್ಥಿಗಳು ಕರ್ನಾಟಕ ಹೈಕೋರ್ಟ್ನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.







