ಬೀದರ, ಮಾರ್ಚ.25 (ಕರ್ನಾಟಕ ವಾರ್ತೆ):- ಕ್ಷಯರೋಗ ಪತ್ತೆಯಾದ ರೋಗಿಗಳಿಗೆ ಉಚಿತವಾದ ಆಪ್ತ ಸಮಾಲೋಚನೆ ಮತ್ತು ಚಿಕಿತ್ಸೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಭ್ಯವಿದ್ದು, ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಎಂದು ಜಿಲ್ಲಾ ಕ್ಷಯರೋಗ ಅಧಿಕಾರಿ ಡಾ.ಅನೀಲಕುಮಾರ ಚಿಂತಾಮಣಿ ತಿಳಿಸಿದರು.
ಅವರು ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕೇಂದ್ರ ಬೀದರ ಸಹಯೋಗದಲ್ಲಿ ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಕ್ಷಯರೋಗ ದಿನಾಚಾರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ 2024-25ರಲ್ಲಿ ಒಟ್ಟು 2516 ರೋಗಿಗಳಿಗೆ ಚಿಕಿತ್ಸೆಗೆ ಒಳಪಡಿಸಿದೆ 2257 ರೋಗಿಗಳು ಗುಣಮುಖರಾಗಿದ್ದಾರೆ. ಸದೃಢ ದೇಶ ಕಟ್ಟಲು ಸದೃಢ ಆರೋಗ್ಯ ಮುಖ್ಯ. ಕ್ಷಯರೋಗವು ಸಂಪೂರ್ಣವಾಗಿ ಗುಣಪಡಿಸಬಹುದಾದ ಕಾಯಿಲೆಯಾಗಿದೆ. ಹೊಸ ಪ್ರಕರಣಗಳ ಪತ್ತೆ ಹಚ್ಚಿವಿಕೆಯು ವೇಗ ಪಡೆದುಕೊಂಡಿದೆ ಮುಖ್ಯವಾಗಿ ರೋಗಿಗಳಿಗ ಆಪ್ತ ಸಮಾಲೋಚನೆಯ ಮಾಡಿ ಮನವೊಲಿಸಿ ಮಧ್ಯದಲ್ಲಿಯೇ ಚಿಕಿತ್ಸೆ ನಿಲ್ಲಸುವ ಪ್ರಮಾಣ ತಗ್ಗಿಸಬೇಕು. ಈ ವರ್ಷ ಸುಮಾರು 50940 ಸಾವಿರ ಕಫ ಮಾದರಿ ಸಂಗ್ರಹಣೆಯಲ್ಲಿ 2552 ಹೊಸ ಟಿ.ಬಿ. ರೋಗಿಗಳನ್ನು ಪತ್ತೆ ಹಚ್ಚಲಾಗಿದೆ ಹೀಗಿದ್ದಾಗ ಸಹ ಸಾಧಸುವುದು ಇನ್ನು ಬಹಳ ಇದೆ. ಜಿಲ್ಲೆಯ ಎಲ್ಲಾ ಗ್ರಾಮ ಮತ್ತು ಪಂಚಾಯತಿಗಳ ಸಹಯೋಗದೊಂದಿಗೆ 2026ರಲ್ಲಿ ಕ್ಷಯರೋಗ ಮುಕ್ತ ಬೀದರ ಜಿಲ್ಲೆಮಾಡುವಂತಹ ಗುರಿ ಹೊಂದಲಾಗಿದೆ. ಟ.ಬಿ. ಮುಕ್ತ ದೇಶ ಮಾಡಲು ಚಿಕಿತ್ಸೆ ಆಪ್ತ ಸಮಾಲೋಚನೆ ಮತ್ತು ತಿಳುವಳಿಕೆ ಈ ಮೂರು ಅಂಶಗಳನ್ನೊಳಗೊಂಡ ವ್ಯವಸ್ಥೆಯೊಂದಿಗೆ ಜಿಲ್ಲೆಯನ್ನು ಕ್ಷಯರೋಗ ಮುಕ್ತ ಮಾಡಬಹುಹುದೆಂದರು.
ಕ್ಷಯರೋಗಿಗಳನ್ನು ಬೇಗ ಪತ್ತೆ ಹಚ್ಚವುದು, ತಕ್ಷಣ ಚಿಕಿತ್ಸೆ ನೀಡುವ ಸಂಕಲ್ಪದೊಂದಿಗೆ ಪ್ರಸಕ್ತ ಸಾಲಿನಲ್ಲಿಯೇ ನಾವು ಕ್ಷಯ ಮುಕ್ತ ಜಿಲ್ಲೆಯಾಗಿಸಲು ಸಾಧ್ಯ. ಆರೋಗ್ಯ ಕಾರ್ಯಕರ್ತರು ಹಗಲಿರುಳೆನ್ನದೇ ಈ ದಿಸೆಯಲ್ಲಿ ಕಾರ್ಯ ಕಾರ್ಯಪ್ರವೃತ್ತರಾಗುವಂತೆ ಕರೆ ಕೊಟ್ಟರು. ಪ್ರತಿಯೊಬ್ಬರು ತಮ್ಮ ವೈಯಕ್ತಿಕ ಕಾಳಜಿ ಮತ್ತು ಚಿಕಿತ್ಸೆ ಮಾಡಬೇಕು ಮೇಲಿಂದ ಮೇಲೆ ಆಪ್ತ ಸಮಾಲೋಚನೆ ಮಾಡುತ್ತ ರೋಗಿಯೋಂದಿಗೆ ನೇರ ಸಂಪರ್ಕ ಹೊಂದಬೇಕು ಅಂದಾಗ ಮಾತ್ರ ಕ್ಷಯ ಮುಕ್ತ ಜಿಲ್ಲೆ ಮಾಡಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು, ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗದವರು ಸೇರಿದಂತೆ ಇತರರು ಉಪಸ್ಥಿತರಿದ್ದರು







