ಬೀದರ, ಮಾರ್ಚ.18 (ಕರ್ನಾಟಕ ವಾರ್ತೆ):- ಜೀವನದಲ್ಲಿ ಸಾಮಾಜಿಕ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿದ್ದರೆ ಮಾತ್ರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜನರ ಹಾಗೂ ಇನ್ನೀತರ ಮೇಲಾಗುವ ದೌರ್ಜನ್ಯಗಳನ್ನು ತಡೆಯಲು ಸಾಧ್ಯ ಎಂದು ಜನವಾಡ ಗ್ರಾಮ ಪಂಚಾಯತನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಗಪ್ಪಾ ಪೂಜಾರಿ ಹೇಳಿದರು.
ಅವರು ಸೋಮವಾರ ಸಮಾಜ ಕಲ್ಯಾಣ ಇಲಾಖೆ ಹಾಗೂ ಮಹಾಮಾನವ ಯೂನಿವರಸಲ್ ವೆಲಫೇರ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬೀದರನ ಜನವಾಡ ಗ್ರಾಮದ ಪಾಂಡುರAಗ ಮಂದಿರದಲ್ಲಿ ಹಮ್ಮಿಕೊಂಡಿದ್ದ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ದೌರ್ಜನ್ಯದ ಕುರಿತು ಜಾಗೃತಿ/ಅರಿವು ಕಾರ್ಯಕ್ರಮದ ವಿಚಾರ ಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು.
ಸಮುದಾಯದ ಜನರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವ ಮೂಲಕ ಸಮಾಜ ಹಾಗೂ ದೇಶದ ಆಸ್ತಿಯನ್ನಾಗಿ ಮಾಡುವ ಕಡೆ ಗಮನಹರಿಸಬೇಕೆಂದರು.
ಕಾರ್ಯಕ್ರಮದಲ್ಲಿ ಮಹಾಮಾನವ ಯುನಿವರಸಲ್ ವೆಲಫೇರ್ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಅಶೋಕಕುಮಾರ ಮಾಳಗೆ, ನ್ಯಾಯವಾಡಿ ನಾರಾಯಣ ಣೇಶ, ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷ ಕೃಷ್ಣ ಹುಪಳೆ ಅವರುಗಳು ಮಾತನಾಡಿದರು.
ಈ ಸಂದರ್ಭದಲ್ಲಿ ಶಿವಕುಮಾರ, ವಿಜಯಕುಮಾರ, ರವಿ, ಜೈರಾಜ ಪಾಟೀಲ್, ಆರ್ಯಾ ಗಡದೆ, ಗೌತಮ ಮುಂತ್ತAಗಿಕರ್, ದೇವಿದಾಸ ಚಿಮಕೋಡ್, ಬಕ್ಕಪ್ಪ ದಂಡಿನ್, ಗ್ರಾಮದ ಹಿರಿಯರು, ಸ್ವ-ಸಹಾಯ ಸಂಘದ ಸದಸ್ಯರು ಹಾಗೂ ಸಾರ್ವಜನಿಕರು ಸೇರಿದಂತೆ ಇತರರು ಉಪಸ್ಥಿತರಿದ್ದರು. ಸ್ವಾಗತ ಮತ್ತು ನಿರೂಪಣೆ ಮಹಾಮಾನವ ಯುನಿವರಸಲ್ ವೆಲಫೇರ್ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಅರುಣ ಪಟೇಲ್ ನಡೆಸಿಕೊಟ್ಟರು.







