Home » ಬೀದರ » ಜೇಸ್ಕಾಂ: ಗ್ರಾಹಕರ ಕುಂದು ಕೊರತೆ ಸಭೆ ಮಾರ್ಚ್.17ಕ್ಕೆ

ಜೇಸ್ಕಾಂ: ಗ್ರಾಹಕರ ಕುಂದು ಕೊರತೆ ಸಭೆ ಮಾರ್ಚ್.17ಕ್ಕೆ

ಬೀದರ, ಮಾರ್ಚ.13 (ಕರ್ನಾಟಕ ವಾರ್ತೆ):- ಜೇಸ್ಕಾಂ ಹುಮನಾಬಾದ ಕಾರ್ಯ ಮತ್ತು ಪಾಲನೆ ವಿಭಾಗ ವ್ಯಾಪ್ತಿಯ ಹುಮನಾಬಾದ, ಮನ್ನಾಏಖೇಳ್ಳಿ ಹಾಗೂ ಬಸವಕಲ್ಯಾಣ, ಉಪ-ವಿಭಾಗಗಳಲ್ಲಿ ಮಾರ್ಚ್.17 ರಂದು ಗ್ರಾಹಕರ ಕುಂದು-ಕೊರತೆ ನಿವಾರಣಾ ಸಭೆಯನ್ನು ಕಾರ್ಯನಿರ್ವಾಹಕ ಇಂಜಿನಿಯರರು (ವಿ), ಗು.ವಿ.ಸ.ಕಂ.ನಿ ಹುಮನಾಬಾದ ರವರ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿರುತ್ತದೆ.
ಸಭೆಗಳ ವಿವರ: ಮಾರ್ಚ್.17 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಹುಮನಾಬಾದ ಉಪ ವಿಭಾಗದ ಗ್ರಾಮೀಣ ಶಾಖೆ ಕಛೇರಿಯಲ್ಲಿ ಮತ್ತು ಮನ್ನಾಏಖೇಳ್ಳಿ ಉಪ ವಿಭಾಗದ ಮನ್ನಾಏಖೇಳ್ಳಿ ಶಾಖೆ ಕಛೇರಿಯಲ್ಲಿ ಹಾಗೂ ಬಸವಕಲ್ಯಾಣ ಉಪ ವಿಭಾಗದ ಹುಲಸೂರ ಶಾಖೆ ಕಛೆರಿಯಲ್ಲಿ ನಡೆಯಲಿವೆ.
ಆದಕಾರಣ ಸಾರ್ವಜನಿಕರು ಹಾಗೂ ಗು.ವಿ.ಸ.ಕಂ.ನಿ, ಗ್ರಾಹಕರು ಸಭೆಯಲ್ಲಿ ಉಪಸ್ಥಿತರಿದ್ದು, ಕುಂದು ಕೊರತೆಯ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದು ಹುಮನಾಬಾದ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು(ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This