Home » Uncategorized » ದೇವರ ದಾಸಿಮಯ್ಯ ವಚನ ಸಾಹಿತ್ಯದ ಆದ್ಯ ಪ್ರವರ್ತಕ-ಚಂದ್ರಕಾಂತ ಪೂಜಾರಿ

ದೇವರ ದಾಸಿಮಯ್ಯ ವಚನ ಸಾಹಿತ್ಯದ ಆದ್ಯ ಪ್ರವರ್ತಕ-ಚಂದ್ರಕಾಂತ ಪೂಜಾರಿ

ಬೀದರ, ಮಾರ್ಚ.23 (ಕರ್ನಾಟಕ ವಾರ್ತೆ):- ದಾಸಿಮಯ್ಯನವರು ಕನ್ನಡದ ಮೊದಲ ವಚನಕಾರರಲ್ಲಿ ಒಬ್ಬರು ಇವರನ್ನು ವಚನ ಸಾಹಿತ್ಯದ ‘ಆದ್ಯ ವಚನಕಾರ ಎಂದು ಕರೆಯಲಾಗುತ್ತದೆಂದು ಹೆಚ್ಚುವರಿ ಪೊಲೀಸ್ ವರೀಷ್ಟಾಧಿಕಾರಿ ಚಂದ್ರಕಾAತ ಪೂಜಾರಿ ಹೇಳಿದರು.
ಅವರು. ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೀದರ ಇವರ ಸಂಯುಕ್ತಾಶ್ರಯದಲ್ಲಿ ನಗರದ ಪೂಜ್ಯ ಡಾ. ಚನ್ನಬಸವ ಪಟ್ಟದೇವರ ರಂಗಮAದಿರದಲ್ಲಿ ಆಯೋಜಿಸಿದ ದೇವರ ದಾಸಿಮಯ್ಯ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಂದಿನ ಕಾಲದ ಜನರಲ್ಲಿ ಇದ್ದ ಮೂಢನಂಬಿಕೆಗಳನ್ನು ಮತ್ತು ಮೇಲು-ಕೀಳು ಎಂಬ ಭೇದಭಾವವನ್ನು ಇವರು ತಮ್ಮ ಸರಳವಾದ ಮಾತುಗಳ ಮೂಲಕ ತಿದ್ದಿದರು. “ದೇವರಿಗೆ ಜಾತಿ ಇಲ್ಲ, ಭಕ್ತಿಯೇ ಮುಖ್ಯ” ಎಂದು ಸಾರಿದ ಇವರು, ಹೆಣ್ಣು-ಗಂಡು ಎಂಬ ವ್ಯತ್ಯಾಸ ಮಾಡದೆ ಎಲ್ಲರಿಗೂ ಸಮಾನ ಗೌರವ ಸಿಗಬೇಕು ಎಂದು ಹಂಬಲಿಸಿದ ಕ್ರಾಂತಿಕಾರಿ ಪುರುಷರಾಗಿದ್ದಾರೆ. ಬಸವಣ್ಣನವರಿಗಿಂತ ಮೊದಲೇ ವಚನ ಕ್ರಾಂತಿಗೆ ನಾಂದಿ ಹಾಡಿದ ದಾಸಿಮಯ್ಯನವರ ಕೊಡುಗೆ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕಕ್ಕೆ ಅಪಾರವಾದುದು. ವೃತ್ತಿಯಿಂದ ನೇಕಾರರಾಗಿದ್ದ ಇವರು, ಶ್ರಮಜೀವನದ ಮಹತ್ವವನ್ನು ಸಾರಿದವರು. ಅಜ್ಞಾನದ ಕತ್ತಲನ್ನು ಕಳೆದು ಜ್ಞಾನದ ಬೆಳಕನ್ನು ನೀಡುವ ಇವರ ಚಿಂತನೆಗಳು ಸಮಾಜದಲ್ಲಿ ಸಮಾನತೆ ಮತ್ತು ಭಕ್ತಿಯ ಮಾರ್ಗವನ್ನು ತೋರಿವೆ ಎಂದರು.
ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಬಸವ ಸೇವಾ ಪ್ರತಿಷ್ಠಾದ ಅಧ್ಯಕ್ಷ ಡಾ. ಗಂಗಾAಬಿಕ ಅಕ್ಕಾ, ಕಲಬುರ್ಗಿ ಜಿಲ್ಲೆಯ ಸುರಪುರ ತಾಲೂಕಿನ ಮುದನೂರಿನಲ್ಲಿ ಜನಿಸಿದ ದೇವರ ದಾಸಿಮಯ್ಯನವರು ‘ರಾಮನಾಥ’ ಅಂಕಿತದೊAದಿಗೆ ಸರಳ ಮತ್ತು ವೈಚಾರಿಕವಾಗಿ 176ಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದಾರೆ. ಸಮಾನತೆಯ ತತ್ವ ಸಾರಿದ ದಾಸಿನಯ್ಯನವರು ಪ್ರೀತಿಯೇ ಸಂಪತ್ತು ಎಂದು ಬದುಕಿದ್ದವರು. ತಮ್ಮ ಬದುಕಿನದುದ್ದಕ್ಕೂ ಬೇಟೆಗಾರರು ಸೇರಿದಂತೆ ಅನೇಕರ ಮನಪರಿವರ್ತೆನೆ ಮಾಡಿದ್ದಾರೆ. ದೇವರ ದಾಸಿಮಯ್ಯನವರ ಪತ್ನಿ ದುಗ್ಗಳೆ ಕೂಡ ಮಹಾಸಾಧ್ವಿ ಮತ್ತು ಅನ್ಯೋನ್ಯ ದಾಂಪತ್ಯ ಜೀವನ ನಡೆಸುತ್ತಿದ್ದ ಶರಣೆ. ಎಲ್ಲರೂ ದಾಸಿಮಯ್ಯ ಅವರ ವಚನಗಳನ್ನು ಪಠಣ ಮಾಡಬೇಕು ಹಾಗೂ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಬೇಕೆಂದರು.
ವೇದಿಕೆ ಕಾರ್ಯಕ್ರಮ ಮುಂಚಿತವಾಗಿ ದೇವರ ದಾಸಿಮಯ್ಯ ಭಾವಚಿತ್ರ ಮೆರವಣಿಗೆ ನಗರದ ಗಣೇಶ್ ಮೈದಾನದಿಂದ ಪ್ರಾರಂಭವಾಗಿ ಹರಳಯ್ಯ ವೃತ್ತ, ಶಿವಾಜಿ ವೃತ್ತ, ಭಗತ್ ಸಿಂಗ್ ವೃತ್ತ, ಬಸವವೇಶ್ವರ ವೃತ್ತ, ಅಂಬೇಡ್ಕರ್ ವೃತ್ತ, ರೋಟರಿ ವೃತ್ತ ಮಾರ್ಗದಿಂದ ಸಾಗಿ ಪೂಜ್ಯ ಡಾ. ಚನ್ನಬಸವ ಪಟ್ಟದೇವರ ರಂಗಮAದಿಕ್ಕೆ ತಲುಪಿತು.
ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ., ಪಿಯುಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದು ಪಾಸಾದ ವಿದ್ಯಾರ್ಥಿಗಳಿಗೆ, ನಿವೃತ್ತ ಸರ್ಕಾರಿ ನೌಕರರಿಗೆ ಹಾಗೂ ಸಮಾಜಕ್ಕೆ ಕೊಡುಗೆ ನೀಡಿದವರಿಗೆ ವಿಶೇಷವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಡಳಿತ ಕಚೇರಿಯ ಸಹಾಯಕ ನಿರ್ದೇಶಕ ಸೋಮಶೇಖರ್ ಮಡಕಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ರಾಜಶೇಖರ ಒಟಗೆ, ಸಮಾಜದ ಪ್ರಮುಖರಾದ ರಾಮಕೃಷ್ಣ ಸಾಳೆ, ಪ್ರಶಾಂತ್ ಸೇಂದ್ರೆ, ಮಾಧವ ಚೌಡೆಕರ್, ಅಶೋಕ್ ಎಲ್ಲಿ, ನಾಗಪ್ಪ ಜಂಬಗಿ, ಸೋಮಶೇಖರ್ ಅಮಲಾಪುರ, ಕೋಟೆ ವಿಶ್ವನಾಥ್, ಅನುರಾಧ ಚಂದಾ ಸೇರಿದಂತೆ ನೇಕಾರ ಸಮಾಜ ಬಂಧುಗಳು ಉಪಸ್ಥಿತರಿದ್ದರು.

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This