ಬೀದರ, ಏಪ್ರಿಲ್.30 (ಕರ್ನಾಟಕ ವಾರ್ತೆ):- ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ 2024-25 ನೇ ಸಾಲಿನಲ್ಲಿ ಮುಂಗಾರು ಮತ್ತು ಹಿಂಗಾರು ಹಂಗಾಮುಗಳಿಗೆ ಸಂಬAಧಿಸಿದAತೆ ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ವಯ ಬೆಳೆ ವಿಮೆ ಪ್ರಸ್ತಾವನೆಗಳನ್ನು ತಾಂತ್ರಿಕ ಹಾಗೂ ಆಡಳಿತಾತ್ಮಕ ಹಂತಗಳಲ್ಲಿ ಪರಿಶೀಲಿಸಿ, ಅನುಮೋದನೆ/ನಿರಾಕರಣೆ ಕ್ರಮ ಕೈಗೊಳ್ಳಲಾಗಿದೆ.
ಪರಿಶೀಲನೆ ಬಳಿಕ ವಿಮಾ ಸಂಸ್ಥೆಯಿAದ ನಿರಾಕರಿಸಲ್ಪಟ್ಟ ಅರ್ಜಿಗಳ ವಿವರ: ಮುಂಗಾರು ಹಂಗಾಮಿನಲ್ಲಿ ಬಸವಕಲ್ಯಾಣ ತಾಲ್ಲೂಕಿನ 1369 ಹಾಗೂ ಹುಲಸೂರು ತಾಲ್ಲೂಕಿನ 712 ಸೇರಿ ಒಟ್ಟು 2081 ಅರ್ಜಿಗಳು ನಿರಾಕರಿಸಲ್ಪಟ್ಟಿವೆ. ಹಿಂಗಾರು ಹಂಗಾಮಿನಲ್ಲಿ ಬಸವಕಲ್ಯಾಣ ತಾಲ್ಲೂಕಿನ 0 ಹಾಗೂ ಹುಲಸೂರು ತಾಲ್ಲೂಕಿನ 05 ಒಟ್ಟು 05 ಅರ್ಜಿಗಳು ನಿರಾಕರಿಸಲ್ಪಟ್ಟಿವೆ.
ನಿರಾಕರಿಸಲ್ಪಟ್ಟ ಅರ್ಜಿಗಳ ವಿವರಗಳನ್ನು ಈಗಾಗಲೇ ಸಂಬAಧಿತ ರೈತ ಸಂಪರ್ಕ ಕೇಂದ್ರಗಳ ಸೂಚನಾ ಫಲಕಗಳಲ್ಲಿ ಪ್ರಕಟಿಸಲಾಗಿದೆ. ಅರ್ಜಿಗಳು ನಿರಾಕರಣೆಯಾಗಿರುವ ರೈತರು ತಮ್ಮ ಅರ್ಜಿಗಳ ಬಗ್ಗೆ ಯಾವುದೇ ಆಕ್ಷೇಪಣೆ ಅಥವಾ ಮನವಿ ಇದ್ದಲ್ಲಿ ದಿನಾಂಕ: 05-05-2026 ರೊಳಗಾಗಿ ಸಂಬAಧಿತ ರೈತ ಸಂಪರ್ಕ ಕೇಂದ್ರಕ್ಕೆ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಮನವಿ ಸಲ್ಲಿಸಬಹುದು. ಸಲ್ಲಿಇಸಲಾದ ಆಕ್ಷೇಪಣೆಗಳನ್ನು ಮರುಪರಿಶೀಲನೆಗೆ ಒಳಪಡಿಸಲಾಗುವುದು. ರೈತರು ನಿಗದಿತ ಅವಧಿಯೊಳಗೆ ಅಗತ್ಯ ದಾಖಲೆಗಳೊಂದಿಗೆ ಮನವಿ ಸಲ್ಲಿಸಿ ಸದುಪಯೋಗಪಡಿಸಿಕೊಳ್ಳುವಂತೆ ಬಸವಕಲ್ಯಾಣ/ಹುಲಸೂರು ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







