Home » ಇತ್ತೀಚಿನ ಸುದ್ದಿ » ಮಾರ್ಚ್ 18 ರಂದು ಬೀದರ ಜಿಲ್ಲೆಯಲ್ಲಿ ಗುವಿಸಕಂನಿ ಜನ ಸಂಪರ್ಕ ಸಭೆ

ಮಾರ್ಚ್ 18 ರಂದು ಬೀದರ ಜಿಲ್ಲೆಯಲ್ಲಿ ಗುವಿಸಕಂನಿ ಜನ ಸಂಪರ್ಕ ಸಭೆ

ಬೀದರ, ಮಾರ್ಚ.16 (ಕರ್ನಾಟಕ ವಾರ್ತೆ):- ಬೀದರ ಕಾರ್ಯ ಮತ್ತು ಪಾಲನೆ ವಿಭಾಗ ವ್ಯಾಪ್ತಿಯ ಔರಾದ(ಬಿ), ಭಾಲ್ಕಿ, ಬೀದರ, ಕಮಠಾಣ ಉಪ ವಿಭಾಗದಲಿ ಮಾರ್ಚ್. 18 ರಂದು ಜನ ಸಂಪರ್ಕಸಭೆ ಹಾಗೂ ಕೆಇಆರ್‌ಸಿಯ (ಎಸ್.ಒ.ಪಿ) ಮಾನದಂಡಗಳನ್ನು ಕುರಿತು ಅರಿವು ಮೂಡಿಸುವಿಕೆ ಕಾರ್ಯಕ್ರಮವನ್ನು ಕಾರ್ಯನಿರ್ವಾಹಕ ಇಂಜಿನಿಯರರು(ವಿ),/ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರರು(ವಿ) ಗುವಿಸಕಂನಿ ಅವರ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿರುತ್ತದೆ.
ಜನಸಂಪರ್ಕ ಸಭೆಗಳ ವಿವರ: ಮಾರ್ಚ್.18 ರಂದು ಬೆಳಿಗ್ಗೆ 10.30 ಗಂಟೆಗೆ ಔರಾದ್ (ಬಿ) ಉಪ ವಿಭಾಗ ಕಛೇರಿಯಲ್ಲಿ, ಬೀದರ (ನಗರ) ಉಪ ವಿಭಾಗ ಕಛೇರಿಯಲ್ಲಿ, ಕಮಠಾಣ ಉಪ ವಿಭಾಗ ಕಛೇರಿಯಲ್ಲಿ ಹಾಗೂ ಮಧ್ಯಾಹ್ನ 2.30 ಗಂಟೆಗೆ ಭಾಲ್ಕಿ ಉಪ ವಿಭಾಗ ಕಛೇರಿಯಲ್ಲಿ ಬೀದರ (ಗ್ರಾಮೀಣ) ಉಪ ವಿಭಾಗ ಕಛೇರಿಯಲ್ಲಿ ಸಭೆಗಳು ನಡೆಯಲಿವೆ.
ಸಾರ್ವಜನಿಕರು ಹಾಗೂ ಗುವಿಸಕಂನಿ ಗ್ರಾಹಕರು ಸಭೆಯಲ್ಲಿ ಉಪಸ್ಥಿತರಿದ್ದು, ಕುಂದು ಕೊರತೆಯ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದು ಬೀದರ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು(ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This