ಬೀದರ, ಮಾರ್ಚ.16 (ಕರ್ನಾಟಕ ವಾರ್ತೆ):- 2025-26 ನೇ ಸಾಲಿನ ಲಂಬಾಣಿ/ಬAಜಾರಾ ಜನಾಂಗದ ಕಸೂತಿ ಕಲೆಯ ತರಬೇತಿಗಾಗಿ ಕೆಎಸ್ಡಿಸಿ ವತಿಯಿಂದ ಅನಮೋದಿತ ತರಬೇತಿ ಸಂಸ್ಥೆಗಳಲ್ಲಿ ತಮ್ಮ ಹೆಸರನ್ನು ಉಚಿತವಾಗಿ ನೋಂದಣಿ ಮಾಡಿಕೊಂಡು ಕಸೂತಿ ಕಲೆಯ ತರಬೇತಿ ಪೆಡೆದುಕೊಳ್ಳಬೇಕೆಂದು ಬೀದರ ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆದೇಶದಡಿ 2025-26 ನೇ ಸಾಲಿನ ಆಯವ್ಯಯ ಭಾಷಣ ಕಂಡಿಕೆ ಯನ್ವಯ ಲಂಬಾಣಿ ಜನಾಂಗದ ಕಸೂತಿ ಕಲೆಯ ಬಗ್ಗೆ ತರಬೇತಿಯನ್ನು 480 ಲಂಬಾಣಿ ಜನಾಂಗದ ಅಭ್ಯರ್ಥಿಗಳಿಗೆ ಬೀದರ ಜಿಲ್ಲೆಯಲ್ಲಿನ ಕೌಶಲ್ಯ ತರಬೇತಿ ಕೇಂದ್ರಗಳಲ್ಲಿ ನೀಡಲಾಗುವುದು ಎಂದು ಘೋಷಿಸಲಾಗಿರುತ್ತದೆ.
ಅನುಮೋದಿತ ತರಬೇತಿ ನೀಡುವ ಸಂಸ್ಥೆಗಳ ವಿವರ: (1) ಅಭಿಯಾನ್ ಫೌಂಡೇಶನ್ ಧಾರವಾಡ ಕೆರಾಫ: ಸಂಶೋಧನಾ ಶಿಕ್ಷಣ ಸಂಘ ಬೀದರ್, ಪ್ರತಾಪ್ ನಗರ, ಭವಾನಿ ದೇವಸ್ಥಾನದ ಪಕ್ಕದಲ್ಲಿ ನೌಬಾದ್ ಬೀದರ (2) ಅಮರೇಶ್ವರ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಘ ಹುಣಸಗಿ ಯಾದಗೀರ ಕೆರಾಫ: ಅಮರೇಶ್ವರ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಘ ವಿದ್ಯಾನಗರ ಕಾಲೋನಿ ಬೀದರ್. (3) ಜಿಐಎಸ್ಎಸ್ ಫೌಂಡೇಶನ್ ಹಿರೇಕ್ರೂರ್ ಕೆರಾಫ: ಮೆರಿಟ್ಯೂಡ್ ಕೌಶಲ್ಯ ತರಬೇತಿ ಕೇಂದ್ರ, ಕಂಗನಕೋಟ್ ಬೀದರ್-585401. (4) ಹೈಟೆಕ್ ಕಂಪ್ಯೂಟರ್ ಶಿಕ್ಷಣ ಕೇಂದ್ರ ವಿಜಯಪುರ. ಕೆರಾಫ: ನೀಲಗಿರಿ ಸಂಸ್ಥೆ ಮೋಹನ್ ಮಾರುಕಟ್ಟೆ ಬೀದರ್
ಆಸಕ್ತ ಮತ್ತು ಅರ್ಹ 18 ರಿಂದ 35 ವರ್ಷದ ಒಳಗಿನ ಲಂಬಾಣಿ/ಬAಜಾರಾ ಜನಾಂಗದ ಅಭ್ಯರ್ಥಿಗಳು ಮೇಲೆ ಸೂಚಿಸಿರುವ ತರಬೇತಿ ಸಂಸ್ಥೆಗಳನ್ನು ತಮ್ಮ ಹೆಸರನ್ನು ಉಚಿತವಾಗಿ ನೊಂದಾಯಿಸಿಕೊAಡು ಇದರ ಸದುಪಯೋಗ ಪಡೆದುಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 9964323961ಗೆ ಸಂಪರ್ಕಿಸಬೇಕೆAದು ಅವರು ತಿಳಿಸಿದ್ದಾರೆ.







