Home » ಬೀದರ » ಸಂಘಗಳಿಗೆ ಕ್ರೀಡಾ/ಸಂಗೀತ ಸಾಮಗ್ರಿ ವಿತರಣೆ

ಸಂಘಗಳಿಗೆ ಕ್ರೀಡಾ/ಸಂಗೀತ ಸಾಮಗ್ರಿ ವಿತರಣೆ

ಬೀದರ, ಮಾರ್ಚ.3 (ಕರ್ನಾಟಕ ವಾರ್ತೆ):-2025-26ನೇ ಸಾಲಿನಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಬೀದರ ವತಿಯಿಂದ ನೋಂದಾಯಿತ ಯುವಕ/ಯುವತಿ ಸಂಘಗಳಿಗೆ ಕ್ರೀಡಾ/ಸಂಗೀತ ಸಾಮಗ್ರಿಗಳನ್ನು ವಿತರಿಸಲು ಅರ್ಜಿ ಅಹ್ವಾನಿಸಲಾಗಿದೆ ಎಂದು ಬೀದರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯುವಕ ಸಂಘಗಳಿಗೆ ಇರಬೇಕಾದ ಅರ್ಹತೆಗಳು : ಯುವಕ/ಯುವತಿ ಸಂಘಗಳು ಸಹಕಾರ ಸಂಘಗಳ ಕಾಯ್ದೆಯಡಿ ನೋಂದಾಯಿತಗೊಂಡು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಮಾನ್ಯತೆ ಪಡೆದಿರಬೇಕು. ಯುವ ಸಂಘವು ಕನಿಷ್ಠ 15 ಯುವ ಜನರನ್ನು ಸದಸ್ಯರನ್ನಾಗಿ ಹೊಂದಿರಬೇಕು. ಯುವ ಸಂಘವು ಕಾರ್ಯಶೀಲವಾಗಿರಬೇಕು. ಲಗತ್ತಿಸಿರುವ ನಿಗದಿತ ಅರ್ಜಿ ನಮೂನೆಯಲ್ಲಿ ಎಲ್ಲಾ ಮಾಹಿತಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕು. 2024-25 ನೇ ಸಾಲಿನ ವರೆಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಕ್ರೀಡಾ ಮತ್ತು ಸಾಂಸ್ಕøತಿಕ ಸಾಮಾಗ್ರಿಗಳನ್ನು ಪಡೆದಿರಬಾರದು/ಪಡೆದಿದ್ದವರು ಇದಕ್ಕೆ ಅರ್ಹರಿರುವುದಿಲ್ಲಾ ಯುವಕ/ಯುವತಿಯರ ಸಂಘದ ಬೈಲಾದಲ್ಲಿ ಕ್ರೀಡೆ/ಸಾಂಸ್ಕೃತಿ/ಸಂಗೀತಕ್ಕೆ ಪೆÇ್ರೀತ್ಸಾಹ ಅಥವಾ ಉತ್ತೇಜನ ಬಗ್ಗೆ ಉಲ್ಲೇಖಿಸಿರುವುದ ಕಡ್ಡಾಯವಾಗಿರುತ್ತದೆ.

ನೋಂದಾಯಿತ ಆಸಕ್ತ ಯುವಕ/ಯುವತಿ ಸಂಘಗಳು ಅರ್ಜಿಗಳನ್ನು ಸಹಾಯಕ ನಿರ್ದೇಶಕರವರ ಕಾರ್ಯಾಲಯ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಕ್ರೀಡಾಂಗಣ, ಬೀದರ ಕಛೇರಿಯಿಂದ ಪಡೆದು ಸಂಪೂರ್ಣ ವಿವರದೊಂದಿಗೆ ಮಾರ್ಚ.15 ರೊಳಗಾಗಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳುwt

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This